ವರದಿ: ವಿನಯ್ ದೊಡ್ಡ ಕೊಪ್ಪಲು
ಕೆ. ಆರ್ ನಗರ: ತಾಲೂಕಿನ ಬೆಟ್ಟಳ್ಳಿ ಗ್ರಾಮದಲ್ಲಿ ವಾಂತಿಭೇದಿಯಿಂದ ಅಸ್ವಸ್ಥಗೊಂಡಿದ್ದ ನಿವಾಸಿಗಳನ್ನು ಭಾನುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಸಾ.ರಾ.ಮಹೇಶ್ ರವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರೊಂದಿಗೆ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು,ಘಟನೆಯ ಬಗ್ಗೆ ಆರೋಗ್ಯ ಇಲಾಖೆ ಹಾಗು ಸ್ಥಳೀಯ ಗ್ರಾ.ಪಂ.ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಲುಷಿತ ಕುಡಿಯುವ ನೀರು ಸೇವನೆಯಿಂದಾಗಿ ಈ ಘಟನೆ ನಡೆದಿದೆ.
ಗ್ರಾಮದ ಗೋವಿಂದೇಗೌಡ ಎಂಬುವರು ಕಲುಷಿತ ನೀರು ಸೇವಿಸಿ ಮೃತ ಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸವಾಗಿಲ್ಲ ಎಂದು ಆರೋಪಿಸಿದರು. ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸದೆ ಲೋಪ ಎಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿಯಿಂದ ಘಟನೆಗೆ ಕಾರಣ ಸ್ಪಷ್ಟವಾಗುತಿತ್ತು.
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಮೈಸೂರು ಡಿಸಿಯೊಂದಿಗೆ ಮಾತನಾಡಿದ್ದಾರೆ. ತ್ವರಿತವಾಗಿ ಪರಿಹಾರ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ನದಿಯಿಂದ ಶುದ್ದಕುಡಿಯುವ ನೀರು ಪೂರೈಕೆ ಮಾಡುವ ಕೆಲಸ ಮಾಡಿದ್ದೆ.ಶುದ್ದ ಕುಡಿಯುವ ನೀರಿನ ಪೂರೈಕೆ ಘಟಕಗಳ ನಿರ್ವಹಣೆಗೆ ಸಂಬಂಧಿಸಿದ ಇಲಾಖೆ ಹೆಚ್ಚು ಒತ್ತು ನೀಡಬೇಕು.ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಎಂಎಲ್ ಸಿ ಸಿ.ಎನ್.ಮಂಜೇಗೌಡ ಮಾತನಾಡಿ ,’ಬೆಟ್ಟಹಳ್ಳಿ ಗ್ರಾಮದ ಸುಮಾರು 70 ನಿವಾಸಿಗಳು ಸ್ಥಳೀಯ ಗ್ರಾ.ಪಂ.ಹಾಗು ಗ್ರಾಮೀಣ ಕುಡಿಯವ ನೀರು ಇಲಾಖೆ ಪೂರೈಕೆ ಮಾಡಿದ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಮಾಜಿ ಸದಸ್ಯ ಎಂ.ಟಿ.ಕುಮಾರ್, ಜಿಲ್ಲಾ ಮುಖಂಡ ಕೆಗ್ಗರೆ ಕುಚೇಲ ಜಾ.ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾ.ಪಂ. ಮಾಜಿ ಸದಸ್ಯ ರಾಮೇಗೌಡ, ಇಒ ಕುಲದೀಪ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಟರಾಜ್, ವೈದ್ಯರಾದ ಡಾ.ಕಲ್ಲೇಶ್, ಮಧುಸೂದನ್ ಎಇಇಮೋಹನ್, ಗ್ರಾ.ಪಂ. ಅಧ್ಯಕ್ಷೆ ಪವಿತ್ರ, ಸದಸ್ಯ ಚಂದ್ರೆಗೌಡ, ಪಿಡಿಒ ಶ್ರೀಧರ್, ರಾಜಸ್ವ ನಿರೀಕ್ಷಕ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ತುಕಾರಾಂ, ಮುಖಂಡರಾದ ಬಿ.ಸಿ.ಯೋಗೇಶ್, ಬಿ.ಆರ್. ಶ್ರೀಧರ್, ರಮೇಶ್, ಯೋಗಾನಂದ, ತುಳಸಿ ರಾಮ್, ಗುರು, ಶಿವು, ಕುಚೇಲ, ನಟರಾಜ, ಹೆಚ್. ಎನ್.ರಮೇಶ್, ಅರುಣ್, ಗಣೇಶ್, ಶ್ರೀನಿವಾಸ್, ನಾಗರಾಜು, ಚಂದು, ಪ್ರಕಾಶ್, ಅಶೋಕ್, ಹೆಚ್. ಟಿ.ರಮೇಶ್, ಗಂಗಾಧರ್, ದೇವೇಗೌಡ, ಸುರೇಶ, ಕೃಷ್ಣಗೌಡ, ಅನಂತರಾಜು, ವಸಂತ, ಮಾಲತಿ, ಪಲ್ಲವಿ ಹಾಜರಿದ್ದರು.