ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರು ಕೃಷಿ ಕಾರ್ಯಗಳ ಜತೆಗೆ ಹೈನೋಧ್ಯಮವನ್ನು ಉಪ ಕಸುಬನ್ನಾಗಿ ರೂಢಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಹೊಸಕೋಟೆ ಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಆನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದ ಪ್ರತಿಯೊಬ್ಬರು ಸಂಘದ ಸದಸ್ಯರಾಗಿ ಗೋವುಗಳನ್ನು ಸಾಕಣೆ ಮಾಡಿ ಆ ಮೂಲಕ ಹಣ ಸಂಪಾದನೆ ಜತೆಗೆ ಆರೋಗ್ಯವನ್ನು ವೃದ್ದಿಗೊಳ್ಳಿಸಿಕೊಳ್ಳಬೇಕೆಂದ ಶಾಸಕರು ನಮ್ಮ ಸರ್ಕಾರ ರೈತರ ಹಿತವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ರೈತರಿಂದ ಪಡೆಯುವ ಹಾಲಿಗೆ ದರವನ್ನು ಹೆಚ್ಚಿಸಲು ತೀರ್ಮಾನಿಸಿದ್ದು ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭಿನಂದಿಸುತ್ತೇನೆರಾಜ್ಯದ ೧೪ ಹಾಲು ಒಕ್ಕೂಟಗಳ ಪೈಕಿ ಮೈಸೂರು ಹಾಲು ಒಕ್ಕೂಟ ಉತ್ಪಾದಕರಿಗೆ ಹೆಚ್ಚು ದರ ನೀಡುವುದರ ಜತೆಗೆ ನಿತ್ಯ ಅತ್ಯಧಿಕ ಹಾಲು
ಸಂಗ್ರಹ ಮಾಡುತ್ತಿದ್ದು ಇದರಿಂದ ನಮ್ಮ ಜಿಲ್ಲೆಯ ರೈತರ ಬದುಕು ಹಸನಾಗುವುದರ ಜತೆಗೆ ಆರ್ಥಿಕ ಶಕ್ತಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಹೈನುಗಾರಿಕೆ ಪ್ರಮುಖ ಕಾರಣ ಎಂದು ತಿಳಿಸಿದರು.
ಜಗತ್ತನ್ನೆ ಸಂಕಷ್ಟಕ್ಕೆ ಸಿಲುಕಿಸಿದ್ದ ಕರೋನ ಸೋಂಕಿನ ಸಮಯದಲ್ಲಿಯೂ ನಮ್ಮನ್ನು ಕಾಪಾಡಿದ್ದು ರೈತ ಸಂಕುಲ ಮತ್ತು ಹೈನೋದ್ಯಮ ಇದನ್ನು ಎಲ್ಲರೂ ಅರಿತು ಭವಿಷ್ಯದಲ್ಲಿ ಕೃಷಿ ಚಟುವಟಿಕೆ ಮತ್ತು ಕಾಯಕಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಹೊಸಕೋಟೆ ಕೊಪ್ಪಲು ಗ್ರಾಮ ನಮ್ಮ ಕುಟುಂಬದ ತವರಾಗಿದ್ದು ಈ ಹಿಂದೆ ಅಧಿಕಾರ ನಡೆಸಿದ ಮಹಾಶಯ ನಿಮ್ಮಗಳ ಕ್ಷೇಮ ಮತ್ತು ಅಭಿವೃದ್ದಿಯನ್ನು ಕಡೆಕಾಣಿಸಿದ್ದು ಅದಕ್ಕೆ ಇತಿಶ್ರೀ ಹಾಡಲು ನಾನು ನಿರ್ಧಾರ ಮಾಡಿದ್ದು ನಿಮ್ಮೂರಿನ ಜತೆಗೆ ಸುತ್ತಮುತ್ತಲ ಗ್ರಾಮಗಳ ಏಳಿಗೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದು ಅನುಷ್ಠಾನ ಮಾಡುತ್ತೇನೆ ಎಂದು ಭರವಸೆ ಮಾತುಗಳ್ಳನ್ನಾಡಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಗೆ ಹಣ ಕೊಡಲು ನಾನು ಬದ್ದನಾಗಿದ್ದು ಆರು ತಿಂಗಳೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಿಸುತ್ತೇನೆ ಎಂದು ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಮಾತನಾಡಿ ಣಡಿ.ರವಿಶಂಕರ್ ಅವರು ಕ್ಷೇತ್ರದ ಶಾಸಕರಾದ ನಂತರ ಸರ್ವ ಜನಾಂಗದವರನ್ನು ಸಮಾನತೆಯಿಂದ ನೋಡುತ್ತಿದ್ದು ಇದರೊಂದಿಗೆ ಅಭಿವೃದ್ದಿ ಕೆಲಸ ಮಾಡುವಾಗ ಯಾವುದೇ ತಾರತಮ್ಯ ಮಾಡುತ್ತಿಲ್ಲ ಇಂತಹ ಜನ ನಾಯಕ ಎಲ್ಲರಿಗೂ ಅಗತ್ಯವಿದ್ದು ಸರ್ವರೂ ಅವರನ್ನು ನಿರಂತರವಾಗಿ ಬೆಂಬಲಿಸಬೇಕು ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಮಾತನಾಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಅತಿ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದ್ದು ಇದರಿಂದ ನಮ್ಮ ರೈತರ ಹಸನಾಗುತ್ತಿದೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಸದಸ್ಯ ಚಿಕ್ಕೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ
ಭಾಗ್ಯಮಹದೇವ್, ಸೋಮಣ್ಣ, ಅಶೋಕ್, ಜಲೇಂದ್ರ, ಕರ್ಣ, ಮಂಜುನಾಥ್, ವನಜಾಕ್ಷಿಮಹದೇವ್, ಗ್ರಾ.ಪಂ. ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಸಿ.ಕೆ.ಬಸವರಾಜು, ಸದಸ್ಯರಾದ ಕೃಷ್ಣ, ರತ್ನಮಂಚನಾಯಕ, ದೇವೇಂದ್ರ, ಪಾಪಣ್ಣ, ಪುನೀತ್, ಮುಖಂಡರಾದ
ವೆಂಕಟೇಶ್, ಹೊಸಕೋಟೆಚೆಲುವರಾಜು, ರೇವಣ್ಣಸ್ವಾಮಿ, ಜಯಣ್ಣ, ಹೆಚ್.ಪಿ.ಶಿವಕುಮಾರ್, ಯಜಮಾನರಾದ ಚಿಕ್ಕೇಗೌಡ, ಶಂಕರೇಗೌಡ, ನಾಗರಾಜು, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.