Saturday, April 19, 2025
Google search engine

Homeರಾಜ್ಯಸುದ್ದಿಜಾಲಬೋಳಿಯಾರ್: ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಸಹಬಾಳ್ವೆಯ ಮೀಲಾದುನ್ನಬಿ ಆಚರಣೆ; ಸ್ಪೀಕರ್ ಯು.ಟಿ.ಖಾದರ್ ಶ್ಲಾಘನೆ

ಬೋಳಿಯಾರ್: ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಸಹಬಾಳ್ವೆಯ ಮೀಲಾದುನ್ನಬಿ ಆಚರಣೆ; ಸ್ಪೀಕರ್ ಯು.ಟಿ.ಖಾದರ್ ಶ್ಲಾಘನೆ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರ್ ಮಸೀದಿಯ ಮೀಲಾದುನ್ನಬಿ ಮೆರವಣಿಗೆಯಲ್ಲಿ ಹಿಂದೂ, ಕ್ರೈಸ್ತರು ಸಿಹಿತಿಂಡಿ-ಪಾನೀಯ ವಿತರಿಸಿ ನಾಡಿಗೆ ಸೌಹಾರ್ದ ಸಂದೇಶ ಸಾರಿದ್ದಾರೆ.
ಇದನ್ನು ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದ್ದಾರೆ.

ಬೋಳಿಯಾರ್ ಮಸೀದಿ ಪರಿಸರದಲ್ಲಿ ಇಂದು ಮೀಲಾದುನ್ನಬಿ ಮೆರವಣಿಗೆಯಲ್ಲಿ ಹಿಂದುಗಳು ಸಿಹಿತಿಂಡಿ, ಪಾನೀಯ ವಿತರಿಸಿದ್ದಾರೆ. ಈ ಸಾಮರಸ್ಯದ ಆಶಯವನ್ನು ಶ್ಲಾಘಿಸಿರುವ ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ. ಖಾದರ್, “ಇಂದು ಮನಸ್ಸು-ಮನಸ್ಸುಗಳು ಒಂದುಗೂಡಿ ಸೌಹಾರ್ದತೆಯ ಭಾಷ್ಯವನ್ನು ದಾಖಲಿಸಿದೆ.

ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲರೂ ಸಹಬಾಳ್ವೆಯ ಮೀಲಾದುನ್ನಬಿ ಆಚರಿಸಿದ್ದಾರೆ. ಆ ಮೂಲಕ ಬೋಳಿಯಾರ್ ಜನತೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಜಾತಿ ಮತ ಬೇಧವಿಲ್ಲದೇ ಪರಸ್ಪರ ಹಂಚಿ ತಿನ್ನುವ ಈ ಸೌಹಾರ್ದದ ನಡೆ ಹೀಗೇ ಮುಂದುವರಿಯಲಿ” ಎಂದು ಹೇಳಿದ್ದಾರೆ.

ಕಳೆದ ಜೂನ್ ನಲ್ಲಿ ಪ್ರಧಾನಿ ಮೋದಿಯವರ ಪದಗ್ರಹಣದ ಹಿನ್ನೆಲೆಯಲ್ಲಿ ಬೋಳಿಯಾರ್​ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯ ಒಂದೆರೆಡು ಕಡೆ ಪ್ರಚೋದನಕಾರಿ ಸ್ಲೋಗನ್ ಕೂಗಲಾಗಿತ್ತು. ರಾತ್ರಿ 8:45ರ ಸುಮಾರಿಗೆ ಈ ಮೆರವಣಿಗೆ ಮುಕ್ತಾಯವಾಗಿತ್ತು. ನಂತರ ಒಂದು ಬೈಕ್​ನಲ್ಲಿ ಬಂದ ಮೂವರು ಬೋಳಿಯಾರು ಮಸೀದಿ ಬಳಿ ಮತ್ತೆ ಪ್ರಚೋದನಕಾರಿ ಸ್ಲೋಗನ್ ಕೂಗಿ ಗಲಭೆಗೆ ಪ್ರಚೋದನೆ ನೀಡಿ ಮುಂದೆ ಹೋಗಿದ್ದಾರೆ. ಈ ವೇಳೆ ಕೆಲವು ಯುವಕರು ಅವರನ್ನು ಹಿಂಬಾಲಿಸಿದ್ದಾರೆ. ಬಾರೊಂದರ ಸಮೀಪ ಮಾತಿನ ಚಕಮಕಿ ನಡೆದಿತ್ತು. ಪರಸ್ಪರ ಮಾತಿಗೆ ಮಾತು ಬೆಳೆದು ಇಬ್ಬರಿಗೆ ಚೂರಿಯಿಂದ ಇರಿಯಲಾಗಿತ್ತು.

RELATED ARTICLES
- Advertisment -
Google search engine

Most Popular