Sunday, April 20, 2025
Google search engine

Homeಸ್ಥಳೀಯತಪ್ಪಿಸ್ಥರು ಯಾರೇ ಇರಲಿ ಶಿಕ್ಷೆ ಯಾಗುತ್ತದೆ

ತಪ್ಪಿಸ್ಥರು ಯಾರೇ ಇರಲಿ ಶಿಕ್ಷೆ ಯಾಗುತ್ತದೆ


ತಿ.ನರಸೀಪುರ: ತಪ್ಪಿಸ್ಥರು ಯಾರೇ ಇರಲಿ ಶಿಕ್ಷೆ ಯಾಗುತ್ತದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಹೇಳಿದರು.
ಮೃತ ವೇಣುಗೋಪಾಲ್ ಮನೆಗೆ ಭೇಟಿ ಸಾಂತ್ವಾನ ಹೇಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು ಶ್ರೀ ಗುಂಜ ನರಸಿಂಹಸ್ವಾಮಿ ವೇಣುಗೋಪಾಲ್ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದರು.
ತಪ್ಪಿಸ್ಥರು ಯಾರೇ ಇರಲಿ ಶಿಕ್ಷೆ ಯಾಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಕಲಾಪದಲ್ಲಿ ಹೇಳಿದ್ದಾರೆ ಕೊಲೆ ಮಾಡಿರುವುದು ತುಂಬಾ ಖಂಡನೆಯ ಇದರಲ್ಲಿ ಬೇರೆ ಮಾತೇ ಇಲ್ಲ ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರ ವಿರುದ್ಧ ಸಿಟಿ ರವಿ ಮತ್ತು ಅಶ್ವತ್ ನಾರಾಯಣ್ ಹಾಗೂ ಚಕ್ರವರ್ತಿ ಸೂಲಿಬೆಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಮೊದಲು ಇವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು
ಚಕ್ರವರ್ತಿ ಸೂಲಿಬೆಲೆಯವರ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಬೇಕು ದೂರುದಾರರೇ ದೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಯವರ ಮನೆದೇವರು ಎಂದರೆ ಜಾತಿ ಧರ್ಮಸೂರಿನಲ್ಲಿ ಗಲಾಟೆ ಮಾಡಿಸುವುದು ಮುಂಬರುವ ಲೋಕಸಭಾ ಚುನಾವಣೆಗೆ ಧರ್ಮದ ಹೆಸರಿನಲ್ಲಿ ವೋಟ್ ಕೇಳಲು ಗಲಾಟೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ತಿಮ್ಮಯ್ಯ, ಮಾಜಿ ಶಾಸಕರುಗಳಾದ ಬನ್ನೂರು ಕೃಷ್ಣಪ್ಪ, ಸುನಿತಾ ವೀರಪ್ಪಗೌಡ, ರಾಜ್ಯ ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ಉಕ್ಕಲಗೆರೆ ಬಸವಣ್ಣ, ಪುರಸಭಾ ಅಧ್ಯಕ್ಷ ನಂಜುಂಡಸ್ವಾಮಿ, ಸದಸ್ಯ ತುಂಬಲ ಪ್ರಕಾಶ್, ಟೌನ್‌ಅಧ್ಯಕ್ಷ ಅಂದಾನಿ, ಮಾಜಿ ತಾಪಂ ಉಪಾಧ್ಯಕ್ಷ ಮರಯ್ಯ, ಸಿದ್ದೇಗೌಡ, ಸೇರಿದಂತೆ ಮತ್ತಿತರರು ಇದ್ದಾರೆ.

RELATED ARTICLES
- Advertisment -
Google search engine

Most Popular