ಮದ್ದೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಸ್ಥಾನದಲ್ಲಿ ದಿವಾನರಾಗಿ ಕರ್ತವ್ಯ ನಿರ್ವಹಿಸುತಿದ್ದ ಸರ್.ಎಂ. ವಿಶ್ವೇಶ್ವರಯ್ಯ ರವರ ದೂರದೃಷ್ಠಿಯ ಫಲ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸಾಧ್ಯವಾಯಿತೆಂದು ರೈತ ನಾಯಕಿ ಸುನಂದಜಯರಾಂ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಸರ್.ಎಂ. ವಿಶೇಶ್ವರಯ್ಯ ರವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪುತ್ತಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ‘ಯಥಾ ರಾಜ ತತಾ ಪ್ರಜೆ’ ಎಂಬ ನಾಣ್ಮುಡಿಯಂತೆ ಒಡೆಯರ ಮುಂದಾಲೋಚನೆ ಹಾಗೂ ದಿವಾನರ ಪರಿಶ್ರಮದಿಂದ ಕನ್ನಂಬಾಡಿ ಜಲಾಶಯ ನಿರ್ಮಾಣ ಮಾಡಿ, ವೈಜ್ಞಾನಿಕವಾಗಿ ಹಾಗೂ ಕೃಷಿ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವುದು ನಮ್ಮೆಲರ ಬದುಕಿಗೆ ಆಶಾದೀಪವೆಂದರು.
ಕಾರ್ಯಕ್ರಮದ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ಮಹನೀಯರ ಜಯಂತೋತ್ಸವ ಕಾರ್ಯಕ್ರಮವನ್ನು ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಿಂದಾಗಿ ಜಿಲ್ಲೆಯು ಹಸಿರು ಕ್ರಾಂತಿಯಾಗುವ ಜತೆಗೆ ರೈತರು ಸಂತೃಪ್ತಿ ಜೀವನ ನಡೆಸಲು ಕಾರಣಕರ್ತರಾಗಿದ್ದು, ಅವರ ಅವಧಿಯಲ್ಲಿ ಹಲವಾರು ಕಾರ್ಖಾನೆಗಳು, ನೀರಾವರಿ, ಬ್ಯಾಂಕ್ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿದ ಕೀರ್ತಿ ಇಬ್ಬರು ಮಹನೀಯರಿಗೆ ಸಲ್ಲುತ್ತದೆಂದರು.
ಬಳಿಕ ಪುಷ್ಪಾರ್ಚನೆ ಕಾರ್ಯಕ್ರಮಕ್ಕೂ ಮುನ್ನ ವಳಗೆರೆಹಳ್ಳಿ ಗ್ರಾಮದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ನವರ ಪುತ್ಥಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿ ನೆರೆದಿದ್ದ ಗ್ರಾಮಸ್ಥರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ವಿ.ಸಿ.ಉಮಾಶಂಕರ, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ಗ್ರಾಪಂ ಅಧ್ಯಕ್ಷೆ ವಸಂತ, ಸದಸ್ಯರಾದ ಎಸ್. ದಯಾನಂದ, ವಿ.ಜೆ.ಸುನಿಲ್ ಕುಮಾರ್, ವಿ.ಆರ್.ಸುನಿಲ್ಕುಮಾರ್. ಪ್ರಾಕೃಪಸ ಸಂಘ ಮಾಜಿ ಅಧ್ಯಕ್ಷ ಟಿ.ಪುಟ್ಟರಾಜು, ರೈತ ಮುಖಂಡರಾದ ಕೆ.ಜಿ.ಉಮೇಶ್, ಸೊ.ಸಿ.ಪ್ರಕಾಶ್, ವಿ.ಸಿ. ಉಮೇಶ, ಕುದುರ ಗುಂಡಿ ನಾಗರಾಜ, ಸಿಪಾಯಿ ಶ್ರೀನಿವಾಸ, ಎಂ.ವೀರಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಸದಸ್ಯ ವಿ.ಕೆ.ಶ್ರೀನಿವಾಸ, ವಿ.ಎಂ.ರಮೇಶ, ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ತೈಲೂರು ಆನಂದಾಚಾರಿ, ಸುರೇಶಚಾರಿ, ಸೋಂಪುರ ಉಮೇಶ್ ಇದ್ದರು.