Sunday, April 20, 2025
Google search engine

Homeರಾಜ್ಯಅರವಿಂದ್ ಕೇಜ್ರಿವಾಲ್ ಒಂದು ವಾರದೊಳಗೆ ಅಧಿಕೃತ ನಿವಾಸದಿಂದ ನಿರ್ಗಮನ: ಸಂಜಯ್ ಸಿಂಗ್

ಅರವಿಂದ್ ಕೇಜ್ರಿವಾಲ್ ಒಂದು ವಾರದೊಳಗೆ ಅಧಿಕೃತ ನಿವಾಸದಿಂದ ನಿರ್ಗಮನ: ಸಂಜಯ್ ಸಿಂಗ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಂದು ವಾರದೊಳಗೆ ತಮ್ಮ ಅಧಿಕೃತ ನಿವಾಸದಿಂದ ನಿರ್ಗಮಿಸಲಿದ್ದಾರೆ ಎಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಬುಧವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಜ್ರಿವಾಲ್ ಅವರು ಎಎಪಿ ಶಾಸಕರ ನಿಯೋಗದೊಂದಿಗೆ ಮಂಗಳವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಲು ಎಲ್-ಜಿ ಸೆಕ್ರೆಟರಿಯೇಟ್‌ಗೆ ಭೇಟಿ ನೀಡಿದರು. ಮತ್ತು ಅತಿಶಿ ಅವರ ನಾಯಕತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲು ಅನುವು ಮಾಡಿಕೊಟ್ಟರು.

ನಿನ್ನೆ ರಾಜೀನಾಮೆ ಸಲ್ಲಿಸಿದ ನಂತರ, ಕೇಜ್ರಿವಾಲ್, ತಮಗೆ ಒದಗಿಸಲಾಗಿದ್ದ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಬಿಟ್ಟು ಜನರ ನಡುವೆ ಸಾಮಾನ್ಯರಂತೆ ಬದುಕುತ್ತೇನೆ ಎಂದು ಹೇಳಿದ್ದಾರೆ ಎಂಬುವುದಾಗಿ ಸಿಂಗ್ ಮಾಹಿತಿ ನೀಡಿದರು.

ನಾವು ಅವರ ಮನವೊಲಿಸಲು ಪ್ರಯತ್ನಿಸಿದ್ದೇವೆ, ಅವರಿಗೆ ದೈಹಿಕವಾಗಿ ಹಾನಿ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂದು ಹೇಳಿದರು. ‘ನಾನು ಆರು ತಿಂಗಳ ಕಾಲ ಜೈಲಿನಲ್ಲಿ ವಾಸಿಸುತ್ತಿದ್ದೆ, ಆಗ ದೇವರು ನನ್ನನ್ನು ರಕ್ಷಿಸಿದನು, ಈಗ ದೇವರು ನನ್ನನ್ನು ರಕ್ಷಿಸುತ್ತಾನೆ ಎಂದು ಸಂಸದ ಸಂಜಯ್ ಸಿಂಗ್ ಹೇಳಿದರು.

RELATED ARTICLES
- Advertisment -
Google search engine

Most Popular