Wednesday, April 16, 2025
Google search engine

Homeರಾಜ್ಯಸುದ್ದಿಜಾಲರಾಧಾಕೃಷ್ಣನ್ ರ ವಿಚಾರಧಾರೆಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ: ಶಾಸಕ ಡಿ. ರವಿಶಂಕರ್...

ರಾಧಾಕೃಷ್ಣನ್ ರ ವಿಚಾರಧಾರೆಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ: ಶಾಸಕ ಡಿ. ರವಿಶಂಕರ್ ಸಲಹೆ

  • ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತಿ ಮತ್ತು ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಹಾಗೂ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ವಿಚಾರಧಾರೆಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಂಡು ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಭೋಧನೆ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತಿ ಮತ್ತು ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಹಾಗೂ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ
ಮಾತನಾಡಿದರು.

ಮಕ್ಕಳಲ್ಲಿ ಜಾತ್ಯಾತೀತ ಮನೋಭಾವನೆ ಬೆಳೆಸಿ ಗುಣಮಟ್ಟದ ಶಿಕ್ಷಣ ನೀಡಿ ಒಳ್ಳೆಯ ಸಂಸ್ಕಾರ ಕಲಿಸಬೇಕೆಂದು ಸಲಹೆ ನೀಡಿದ ಶಾಸಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತ ಬಹಳ ಪ್ರಮುಖವಾಗಿದ್ದು, ಈ ಸಮಯದಲ್ಲಿ ಮಕ್ಕಳನ್ನು ಸರಿದಾರಿಯತ್ತ ಕೊಂಡ್ಯೂಯುವುದು ಶಿಕ್ಷಕರ ಜವಬ್ದಾರಿಯಾಗಿದೆ ಆದ್ದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ದೇಶ ಸಮಗ್ರಮವಾಗಿ ಅಭಿವೃದ್ದಿ ಕಾಣಲು ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಇದರ ಜತೆಗೆ ಎಲ್ಲರೂ ಶಿಕ್ಷಿತರಾಗಬೇಕು ಅದಕ್ಕಾಗಿ ನಮ್ಮ ಸರ್ಕಾರ ಈ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು ಶಿಕ್ಷಣ ಇಲಾಖೆಯವರು ಮಕ್ಕಳು ಮತ್ತು ಪೋಷಕರೊಂದಿಗೆ ಉತ್ತಮ ಬಾಂಧ್ಯವಿಟ್ಟುಕೊoಡು ಶಿಕ್ಷಿತ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕು ಎಂದರು.

ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ೯ನೇ ಸ್ಥಾನದಲ್ಲಿತ್ತು ಇದನ್ನು ಉತ್ತಮ ಪಡಿಸುವ ಸಲುವಾಗಿ ಸಂಬoಧ ಪಟ್ಟ ಶಿಕ್ಷಕರುಗಳಿಗೆ ಸಾಕಷ್ಟು ತರಬೇತಿ ಶಿಬಿರಗಳನ್ನು ನಡೆಸಿದ ಫಲವಾಗಿ ಈ ಬಾರಿ ೪ನೇ ಸ್ಥಾನ ಪಡೆಯಲು ಸಾಧ್ಯವಾಯಿತು. ಮುಂದಿನ ವರ್ಷ ಮೊದಲನೇ ಸ್ಥಾನಕ್ಕೆ ಬರಲು ಎಲ್ಲರೂ ದುಡಿಯಬೇಕು ಎಂದು ಕೋರಿದರು.

ನಿವೃತ್ತ ಶಿಕ್ಷಕರು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ೧೦೦ರಷ್ಟು ಸಾಧನೆ ಮಾಡಿದ ಶಾಲೆಯ ಮುಖ್ಯಸ್ಥರು
ಮತ್ತು ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ಪದನಿಮಿತ್ತ ಜಂಟಿ ನಿರ್ದೇಶಕರಾದ ಗೀತಾಂಭ, ತಹಶೀಲ್ದಾರ್.ಜಿ.ಸುರೇಂದ್ರಮೂರ್ತಿ, ಬಿಇಒ ಆರ್.ಕೃಷ್ಣಪ್ಪ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪ್ರೌಡಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಬಿ.ಅರುಣ್ ಕುಮಾರರ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣಪುರ ರಾಜಶೇಖರ್, ಪ್ರಧಾನ
ಕಾರ್ಯದರ್ಶಿ ಚಿಕ್ಕಕೊಪ್ಪಲು ಸಿ.ಎನ್.ಸ್ವಾಮಿ, ಬಿಆರ್‌ಸಿ ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಇಒ ವಿ.ಪಿ.ಕುಲ್‌ದೀಪ್, ಶಿಕ್ಷಣ ಸಂಯೋಜಕರಾದ ದಾಸಪ್ಪ, ಸಿ.ಆರ್.ಪಿ.ಗಳಾದ ಚನ್ನಂಗರೆ ಪ್ರಭು, ವಸಂತ್ ಕುಮಾರ್, ರೇವಣ್ಣ, ಚಿಕ್ಕಕೊಪ್ಪಲು ರಮೇಶ್, ಮಹೇಶ್, ಬಿ.ಜಿ.ಕುಮಾರ್, ಸತೀಶ್, ಧರ್ಮರಾಜು,ನಂದಿನಿ,ನರ್ತನ ಈಶ್ವರ್, ಇಂದ್ರಾಣಿ,ಗಿರೀಶ್,ಉದಯಕುಮಾರ್, ಜಗದೀಶ್, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಲಕ್ಕಿಕುಪ್ಪೆ ಶಂಕರೇಗೌಡ, ಲಕ್ಷ್ಮಿಕಾಂತ್, ಮಧುಕುಮಾರ್,
ಜ್ಯೋತಿಕುಮಾರ್, ಸೈಯದ್‌ರಿಜ್ವಾನ್, ಡಿ.ಕೆ.ಜಗದೀಶ್, ಡಿ.ಎಸ್.ಗೋವಿಂದ್, ಮೋಹನ್‌ಕುಮಾರ್, ಎಂ.ಕೆ.ಸತೀಶ್, ಆರ್.ಮಂಜುಳ, ಕೆ.ಪಿ.ಭಾರತಿ, ತುಳಸಿರಾಮನಾಯಕ, ಎಂ.ಪಿ.ಕುಮಾರಸ್ವಾಮಿ, ರಾಮಕೃಷ್ಣ,
ಕೃಷ್ಣನಾಯಕ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular