ಹೊಸೂರು : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ಗೋಲುಕದ ಈಬಾರಿ 6 ಲಕ್ಷದ 55 ಸಾವಿರ ರೂಗಳು ಸಂಗ್ರಹವಾಗಿದೆ . ಬುಧವಾರ ಸಾಲಿಗ್ರಾಮ ತಹಸೀಲ್ದಾರ್ ತಿಮ್ಮಪ್ಪ ಮತ್ತು ಉಪ ತಹಸೀಲ್ದಾರ್ ಕೆ. ಜೆ. ಶರತ್ ಕುಮಾರ್ ಸಮ್ಮುಖದಲ್ಲಿ ದೇವಾಲಯದ ಗೋಲುಕದ ಕಾಣಿಕೆ ಹಣವನ್ನು ದೇವಾಲಯದ ಒಳಪ್ರಾಂಗಣದ ಸಿ.ಸಿ.ಕ್ಯಾಮರಾ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಹಣ ಎಣಿಕೆ ನಡೆಸಲಾಯಿತು. ಮೂರು ತಿಂಗಳಿಗೊಮ್ಮೆ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದೆ. ಆದರೆ ಬಾರಿ ಚುನಾವಣೆ ಎದುರಾದ ಹಿನ್ನಲೆಯಲ್ಲಿ 7 ತಿಂಗಳ ಬಳಿಕ ಹುಂಡಿಯಲ್ಲಿನ ಹಣ ಎಣಿಕೆ ಕಾರ್ಯ ನಡೆಸಿದ್ದು ಒಂದು ಚಿನ್ನದ ಉಂಗೂರ,ಮೂಗೂತಿ ಮತ್ತು ಎರಡು ಬೆಳ್ಳಿ ಪಾದ, 4 ಕಣ್ಣುಗಳು ಸಂಗ್ರಹವಾಗಿದೆ. ಜನವರಿ ತಿಂಗಳಿನಲ್ಲಿ ನಡೆದ ಜಾತ್ರೆ ಹಾಗೂ ಶ್ರೀರಾಮ ಬ್ರಹ್ಮರಥೋತ್ಸವ, ಧಾರ್ಮಿಕ ಸೇವಾ ಕಾರ್ಯಗಳು ನಡೆದ ಹಿನ್ನಲೆಯಲ್ಲಿ ದೇವಾಲಯಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಪರಿಣಾಮ ಈ ಬಾರಿ ಕಾಣಿಕೆಯ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿ ರಘು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆರ್.ಐ ಚಿದಾನಂದಬಾಬು, ಗ್ರಾಮಲೆಕ್ಕಿಗರಾದ ಮೇಘನಾ, ಮೌನೇಶ, ದರ್ಶನ್, ಶಿವಕುಮಾರ್, ಮುನಿರೆಡ್ಡಿ, ಪ್ರಿಯಾ, ಮಧು, ಗ್ರಾಮಸಹಾಯಕರಾದ ಸುಮಿತ್ರ, ಶಶಿಕುಮಾರ್, ವಸಂತ್, ಸೋಮಶೇಖರ್, ರವೀಶ್ ತೇಜ ಮುಂತಾದವರು ಇದ್ದಾರೆ. ಸಂಗ್ರಹವಾದ ಗೋಲುಕದ ಕಾಣಿಕೆ ಹಣವನ್ನು ಹಳಿಯೂರು ಎಸ್.ಬಿ.ಐನ ದೇವಾಲಯದ ಶಾಖೆಗೆ ಜಮ ಮುನ್ನೆಚ್ಚರಿಕೆಯ ಕ್ರಮವಾಗಿ ಚುಂಚನಕಟ್ಟೆ ಉಪಪೊಲೀಸ್ ಠಾಣೆಯ ಮುಖ್ಯಪೇದೆ ಶ್ರೀನಿವಾಸ್ ಬಿಗಿ ಭದ್ರತೆ ಏರ್ಪಡಿಸಿದ್ದರು.