Saturday, April 19, 2025
Google search engine

Homeಸ್ಥಳೀಯಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿಗೆ ಬಿದ್ದ ಯುವತಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿಗೆ ಬಿದ್ದ ಯುವತಿ


ಸಾಲಿಗ್ರಾಮ: ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷೆಯಿಂದ ಸಾಲಿಗ್ರಾಮ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಬಿಲ್ ಕಲೆಕ್ಟರ್ ಉದ್ಯೋಗಿನಿ ಬೈಕ್ ಸಮೇತ ಚರಂಡಿಗೆ ಬಿದ್ದು ಕೈ ಮುರಿದುಕೊಂಡಿರುವ ಘಟನೆ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಮಹಾವೀರ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಲೋಕಪಯೋಗಿ ಇಲಾಖೆಯಿಂದ ಮಾಡಲಾಗಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ ರಸ್ತೆ ಪೂರ್ಣವಾಗಿದೆ ಚರಂಡಿಗಳು ಪೂರ್ಣವಾಗದ ಕಾರಣ ದಿನನಿತ್ಯ ಜನರು ಒಂದಲ್ಲ ಒಂದು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಡಕಚೇರಿ ಎದುರಿಗೆ ಇರುವ ಚರಂಡಿ ಮೇಲೆ ಸ್ಲಾಬ್ ಹಾಕದ ಕಾರಣ ನಾಡಕಚೇರಿಗೆ ದಿನನಿತ್ಯ ನೂರಾರು ಜನರು ಬರುತ್ತಿದ್ದು ದಿನ ಒಂದಲ್ಲ ಒಂದು ಘಟನೆ ನಡೆಯುತ್ತದೆ ಆದರೂ ನಾಡಕಚೇರಿಯ ಅಧಿಕಾರಿಗಳಾಗಲಿ ಲೋಕಪಯೋಗಿ ಅಧಿಕಾರಿಗಳಾಗಲಿ ಯಾರು ಇದ್ದಾಗ ಮನಸಿಲ್ಲ. ಇಲ್ಲಿ ಬೈಕ್ ಪಾರ್ಕಿಂಗ್ ವ್ಯವಸ್ಥೆಯು ಕೂಡ ಇಲ್ಲ ಇದರಿಂದ ಸಣ್ಣಪುಟ್ಟ ಅಪಘಾತಗಳು ಮತ್ತು ಘಟನೆಗಳು ದಿನನಿತ್ಯ ನಡೆಯುತ್ತಿದೆ.
ಅದರಂತೆ ಇಂದು ಪ್ರತಿ ಮನೆ. ಅಂಗಡಿಗೆ ವಿದ್ಯುತ್ ಬಿಲ್ ಅರಿಯಲು ಹೋಗುತ್ತಿದ್ದ ಸುಮಿತ್ರ ಬೈಕ್ ಸಮೇತ ಚರಂಡಿ ಒಳಗಡೆ ಬಿದ್ದಿದ್ದಾರೆ. ಗ್ರಾಮ ಪಂಚಾಯಿತಿ ನಿರ್ಲಕ್ಷೆ ಚರಂಡಿ ಸ್ವಚ್ಛತೆ ಮಾಡದೆ ಚರಂಡಿ ಒಳಗೆ ಮತ್ತು ಹೊರಗೆ ಗಿಡ ಗಂಟೆಗಳು ಬೆಳೆದಿದೆ ಜನರಿಗೆ ಇಲ್ಲಿ ಚರಂಡಿ ಇದೆ ಎಂದು ಕಾಣುವುದಿಲ್ಲ ಈ ಕಾರಣಕ್ಕೆ ಈ ಘಟನೆ ನಡೆದಿದೆ. ಇದರ ಮುಂದೆ ಪೊಲೀಸ್ ಠಾಣೆಯೂ ಕೂಡ ಇದೆ ದಿನನಿತ್ಯ ಪೊಲೀಸ್ ಠಾಣೆಗೆ ಬರುವ ಜನರು ಕೂಡ ಈ ಚರಂಡಿಯಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಕೂಡ ಸಾಕಷ್ಟು ಇದೆ.
ಸಂಬಂಧಪಟ್ಟ ಲೋಕೋಪಯೋಗಿ ಅಧಿಕಾರಿಗಳು ಕೂಡಲೇ ಸ್ಲ್ಯಾಬ್ ಹಾಕುವ ಮೂಲಕ ಮುಂದಾಗುವ ಘಟನೆಗಳ ಬಗ್ಗೆ ಎಚ್ಚರ ವಹಿಸಬೇಕಿದೆ ಜೊತೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವರ್ಗ ಚರಂಡಿ ಸತ್ಯತೆ ಮಾಡಬೇಕಿದೆ. ಪೊಲೀಸ್ ಠಾಣೆ ಅವರು ಕೂಡ ಸ್ಟೇಷನ್ ಮುಂಭಾಗ ಮತ್ತು ನಾಡಕಚೇರಿ ಹಾಗೂ ತಾಲೂಕು ಕಚೇರಿ ಮುಂಭಾಗ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಸಾಲಿಗ್ರಾಮ ಪತ್ರಕರ್ತರು ಬಿಲ್ ಕಲೆಕ್ಟರ್ ಸಮಿತ್ರ ಅವರಿಗೆ ಸಾಲಿಗ್ರಾಮ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಬರೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೆ ಆರ್ ನಗರಕ್ಕೆ ಕಳುಹಿಸಿದರು.

RELATED ARTICLES
- Advertisment -
Google search engine

Most Popular