- ಮಂದಮತಿ ಮಹಿಳೆಯರ ಅನುಪಾಲನಾ ಕೇಂದ್ರ ಉದ್ಘಾಟನೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ವೃದ್ದಾಶ್ರಮ ನಡೆಸಿ ನಿರಾಶ್ರಿತರು ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಆಶ್ರಯ ನೀಡುವವರನ್ನು ನಾವು ಸದಾ ಬೆಂಬಲಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಈಶ್ವರ ನಗರದಲ್ಲಿ ಮಂದಮತಿ ಮಹಿಳೆಯರ ಅನುಪಾಲನಾ ಕೇಂದ್ರ ಉದ್ಘಾಟಿಸಿ
ಮಾತನಾಡಿದ ಅವರು ಉಳ್ಳವರು ಮತ್ತು ಬುದ್ದಿಜೀವಿಗಳು ಆಶ್ರಮಗಳಿಗೆ ತಮ್ಮ ಕೈಲಾದ ಸೇವೆ ಮಾಡಿ ನೊಂದವರ ನೆರವಿಗೆ ದಾವಿಸಬೇಕು ಎಂದರು.
ಅನುಪಾನ ಕೇಂದ್ರಕ್ಕೆ ನಾನು ನಿರಂತರವಾಗಿ ಸಹಕಾರ ನೀಡಲಿದ್ದು ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಕೊಡಿಸಿಕೊಡುತ್ತೇನೆಂದು ಭರವಸೆ ನೀಡಿದ ಅವರು ಸಾರ್ವಜನಿಕರು ಇವರಿಗೆ ಸಹಾಯ ಹಸ್ತ ಚಾಚಿದರೆ ನಿರಾಶ್ರಿತರ ಬದುಕು ಹಸನಾಗಲಿದೆ ಎಂದು ತಿಳಿಸಿದರು.
ಮಾತೃಶ್ರೀ ವೃದ್ದಾಶ್ರಮದ ಕಾರ್ಯದರ್ಶಿ ಕುಪ್ಪೆಮಂಜುನಾಥ್ ಮಾತನಾಡಿ ಪ್ರಸ್ತುತ ನಮ್ಮಲ್ಲಿ ೭ ಮಂದಿ ಮಂದಮತ್ತಿ ಮಹಿಳೆಯರು ದಾಖಲಾಗಿದ್ದು ೨೫ ಮಂದಿಗೆ ಆಶ್ರಯ ನೀಡಲು ಅವಕಾಶವಿದ್ದು ರಸ್ತೆ ಬದಿ
ಮತ್ತು ಸಾರ್ವಜನಿಕರವಾಗಿ ಇರುವ ಇಂತಹಾ ಮಹಿಳೆಯರನ್ನು ನಮ್ಮ ಕೇಂದ್ರಕ್ಕೆ ದಾಖಲು ಮಾಡಲು ನಾಗರೀಕರು ಸಹಕಾರ ನೀಡಬೇಕು ಎಂದರು.
ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಂದಮತಿ ಮಹಿಳೆಯರಿಗೆ ದಾಖಲಾಗಲು ಅವಕಾಶವಿದ್ದು ಹೆಚ್ಚಿನ ಮಾಹಿತಿಗೆ ನಮ್ಮ ಕಛೇರಿಯ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಎಂದು ಕೋರಿದರು.
ಪುರಸಭೆ ಸದಸ್ಯ ಶಂಕರ್‌ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಟಿ.ಮಂಜುನಾಥ್,
ಕೇಂದ್ರದ ಆಪ್ತ ಸಮಾಲೋಚಕಿ ಲಕ್ಷ್ಮೀದೇವಿ, ಸಿಬ್ಬಂದಿಗಳಾದ ಶಿವಗಂಗೆ, ರೋಜಾಮಣಿ, ನಟರಾಜ್,
ಮಿಥುನ್ ಸೇರಿದಂತೆ ಇನ್ನಿತರರು ಹಾಜರಿದ್ದರು.