ಮೈಸೂರು: ಬಿ.ಸಿ.ಎಂ ಹಳೆ ವಿದ್ಯಾರ್ಥಿ ಸಂಘದಉದ್ಘಾಟನಾ ಸಮಾರಂಭ ಸೆ.೨೯ರಂದು ಭಾನುವಾರ ಕಲಾಮಂದಿರದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ನಡೆಯಲು ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಹಕರಿಸಬೇಕೆಂದು ಬಿ.ಸಿ.ಎಂ. ಹಳೆ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಹಾಗು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ತಿಳಿಸಿದರು.
ಈ ಕಾರ್ಯಕ್ರಮವನ್ನು ಮಾನ್ಯಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉದ್ಘಾಟಿಸಲಿದ್ದು ಜಿಲ್ಲೆಯ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೊರದೇಶ, ಹೊರರಾಜ್ಯದ ಮೂಲೆ ಮುಲೆಗಳಲ್ಲಿ ರುವಸಾವಿರಾರು ಹಳೆಯ ವಿದ್ಯಾರ್ಥಿಗಳು ಆಗಮಿಸಿ ಭಾಗವಹಿಸುತ್ತಿರುವುದರಿಂದ ಅವರಿಗೆ ರೂಂಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂಘದಿಂದ ಈಗ ಹಾಸ್ಟಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಆಗಲೆಂದು ಜಿಲ್ಲೆಯಎಲ್ಲಾ ಹಾಸ್ಟಲ್‌ಗಳ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರುಗಳನ್ನು ಸಮಾರಂಭಕ್ಕೆ ಆಹ್ವಾನಿಸಿದ್ದೇವೆ.
ಸಮಾರಂಭದಲ್ಲಿ ಆಗ ಇದ್ದಂತಅಡುಗೆ ಸಿಬ್ಬಂದಿ, ವಾರ್ಡನ್‌ಗಳನ್ನು ಅಭಿನಂಧಿಸುತ್ತಿದ್ದೇವೆ.ತಂದೆಅಥವಾತಾಯಿ ಇಲ್ಲದ ಬಿ.ಸಿ.ಎಂ ಹಾಸ್ಟಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದೇವೆ.ಆದ್ದರಿಂದಪ್ರತ್ರಿಯೊಬ್ಬ ಬಿ.ಸಿ.ಎಂ ಹಳೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.