ನವದೆಹಲಿ: ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಇಂದು ಸೋಮವಾರ ಅಧಿಕಾರ ವಹಿಸಿಕೊಂಡರು.
ಈ ವೇಳೆ ಮಾತನಾಡಿದ ಅವರು, ಭಗವಾನ್ ರಾಮನ ಪಾದಗಳನ್ನು ಸಿಂಹಾಸನದ ಮೇಲೆರಿಸಿ ಭರತ ಆಡಳಿತ ನಡೆಸಿದ ರೀತಿಯಲ್ಲೇ ಮುಂದಿನ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ನಾನು ಕಾರ್ಯ ನಿರ್ವ ಹಿಸುತ್ತೇನೆ. ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಜನತೆ ಕೇಜ್ರಿವಾಲ್ ಅವರನ್ನು ಮರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಕರೆತರುತ್ತಾರೆ ಎಂದು ಭಾವಿಸುತ್ತೇನೆ. ಅಲ್ಲಿಯವರೆಗೆ ಅವರ ಕುರ್ಚಿ ಸಿಎಂ ಕಚೇರಿಯಲ್ಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಬಳಸಿರುವ ಕುರ್ಚಿ ಬಳಸದೆ ಆತಿಶಿ ಬೇರೆ ಕುರ್ಚಿಯ ಮೇಲೆ ಕುಳಿತರು. ದೆಹಲಿ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ ೨೬ ಮತ್ತು ೨೭ರಂದು ನಡೆಯಲಿದೆ. ದೆಹಲಿ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಜೊತೆಗೆ ಐವರು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.