Sunday, April 20, 2025
Google search engine

Homeರಾಜ್ಯಸುದ್ದಿಜಾಲಶೀಘ್ರ ಕಾವೇರಿ ನೀರಿನ ದರ ಏರಿಕೆ ಮಾಡಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್

ಶೀಘ್ರ ಕಾವೇರಿ ನೀರಿನ ದರ ಏರಿಕೆ ಮಾಡಲಾಗುತ್ತೆ : ಡಿಸಿಎಂ ಡಿಕೆ ಶಿವಕುಮಾರ್

ಮಂಡ್ಯ : ಇತ್ತೀಚಿಗೆ ಸರ್ಕಾರ ಹಾಲು, ಪೆಟ್ರೋಲ್, ಅಡುಗೆ ಎಣ್ಣೆ ಏರಿಕೆ ಮಾಡಿತ್ತು. ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಕಾವೇರಿ ನೀರಿನ ದರವನ್ನು ಏರಿಕೆ ಮಾಡಲಾಗುತ್ತದೆ. ಯಾವಾಗಿನಿಂದ ನೀರಿನ ದರ ಏರಿಕೆ ಮಾಡುತ್ತೇವೆ ಎಂಬುದರ ಕುರಿತು ಶೀಘ್ರದಲ್ಲಿ ತಿಳಿಸಲಾಗುತ್ತದೆ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬಳಿ ಇರುವ ಪಂಪ್ ಹೌಸ್‌ಗೆ ಡಿಸಿಎಂ ಶಿವಕುಮಾರ್ ಭೇಟಿ ನೀಡಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡಿನಹಳ್ಳಿ ಬಳಿ ಇರುವ ಪಂಪ ಹೌಸ್ ಗೆ ಭೇಟಿ ನೀಡಿ, ಬೆಂಗಳೂರು ಜಲ ಮಂಡಳಿಯ ಪಂಪ ಹೌಸನ್ನು ಪರಿಶೀಲಿಸಿದರು. ಕಾವೇರಿ ೫ನೇ ಹಂತದಲ್ಲಿ ನಿರ್ಮಿಸಲಾಗಿರುವ ಪಂಪ ಹೌಸ್ ವೀಕ್ಷಣೆ ಮಾಡಿದರು ಈ ವೇಳೆ ಸಚಿವ ಚೆಲುವರಾಯ ಸ್ವಾಮಿ ಸೇರಿದಂತೆ ಹಲವರು ಡಿಕೆ ಶಿವಕುಮಾರ್ ಗೆ ಸಾಥ್ ನೀಡಿದರು.

ತಿರುಪತಿ ಲಡ್ಡು ವಿನಲಿ ಕಲಬರಕೆ ತುಪ್ಪ ಬಳಕೆ ಆರೋಪ ವಿಚಾರವಾಗಿ, ನನಗೆ ಯಾವುದೇ ಅನುಮಾನ ಇಲ್ಲ. ನಾನಂತೂ ತಿರುಪತಿಯಿಂದ ಬರುವ ಲಡ್ಡು ಸ್ವೀಕಾರ ಮಾಡುತ್ತೇನೆ. ನಾನು ಲಡ್ಡು ತಿನ್ನುವವನೇ ಪ್ರಸಾದ ಬಂದರೆ ತಿನ್ನುತ್ತೇನೆ. ನೋಡ್ರಿ ಬೇರೆ ಪಕ್ಷಗಳು ಸ್ವಾಮೀಜಿಗಳು ಹೇಳಬಹುದು ಧಾರ್ಮಿಕ ದತ್ತಿ ಇಲಾಖೆ ಸರ್ಕಾರದ ಒಂದು ಭಾಗ ಮೊದಲಿನಿಂದ ಒಂದು ಸಂಪ್ರದಾಯ ಇದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular