ರಾಮನಗರ: ಬೆಂಗಳೂರು ಜಲಮಂಡಳಿಯಿಂದ ದೇಶದ ಮೂರನೇ ಅತಿದೊಡ್ಡ ನಗರವಾಗಿರುವ ಬೃಹತ್ ಬೆಂಗಳೂರಿಗೆ ಜೀವಜಲವನ್ನು ಒದಗಿಸುವ ಮಹತ್ವದ ಕಾರ್ಯ ಮಾಡಲಾಗುತ್ತಿದೆ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ೧೧೦ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ೨,೨೦೦ ಎಂ.ಎಲ್.ಡಿ ನೀರಿನ ಅವಶ್ಯಕತೆಯಿದ್ದು, ಪ್ರಸ್ತುತ ಇರುವ ನಾಲ್ಕೂ ಹಂತಗಳ ಮೂಲಕ ಲಭ್ಯವಾಗುತ್ತಿರುವುದು ಕೇವಲ ೧,೪೫೦ ಎಂ.ಎಲ್.ಡಿಗಳಷ್ಟು ಮಾತ್ರ. ನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ ೫ನೇ ಘಟ್ಟ ೨ ಹಂತಗಳ ಯೋಜನೆಯನ್ನು ಪ್ರಾರಂಭಿಸಲು ಈ ಹಿಂದೆ ೨೦೧೪ ರಲ್ಲಿ ಯೋಜನೆ ರೂಪಿಸಿ ಅನುಮೋದನೆ ನೀಡಲಾಗಿತ್ತು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಅವರು ಸೆ.೨೩ರ ಸೋಮವಾರ ಬೆಂಗಳೂರಿನ ತಾತಗುಣಿ ವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ೫ನೇ ಹಂತದ ಪಂಪ್ ಸ್ಟೇಷನ್ ಪರಿವೀಕ್ಷಣೆ ನಡೆಸಿ ಮಾತನಾಡಿದರು.
೨೦೧೬ರಲ್ಲಿ ಬೆಂಗಳೂರಿಗೆ ಹೆಚ್ಚುವರಿಯಾಗಿ ಅಗತ್ಯವಿರುವಂತಹ ೧೦ ಟಿಎಂಸಿ ನೀರನ್ನು ಹಂಚಿಕೆ ಮಾಡಿಸುವಲ್ಲಿ ಅಂದಿನ ಸರ್ಕಾರ ಯಶಸ್ವಿಯಾಯಿತು. ೨೦೧೬ ರಿಂದ ೨೦೧೮ ರ ವರೆಗೆ ಈ ಬೃಹತ್ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ರಚಿಸಲಾಯಿತು. ೨೦೧೮ ರಲ್ಲಿ ಜೈಕಾಗೆ ಡಿಪಿಆರ್ ಪ್ರಸ್ತಾವನೆ ಸಲ್ಲಿಸಿ, ಜೆಐಸಿಎ ಜತೆ ಔಪಚಾರಿಕ ಸಾಲ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳು ೨೦೨೦ ರ ಮಾರ್ಚ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿ ಕಾರ್ಯಾದೇಶಗಳನ್ನು ನೀಡಲಾಯಿತು ಎಂದರು.
ಒಂದೇ ಹಂತದಲ್ಲಿ ೫೦ ಲಕ್ಷ ಜನರಿಗೆ ನೀರು ಒದಗಿಸುವ ದೇಶದ ಬೃಹತ್ ಯೋಜನೆ ಇದಾಗಿದೆ. ಭಾರತದಲ್ಲಿ ಅತಿದೊಡ್ಡ ೭೭೫ ಎಂ.ಎಲ್.ಡಿ ಸಾಮರ್ಥ್ಯದ ಅತ್ಯಾಧುನಿಕ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಈ ಯೋಜನೆಯ ಪ್ರಮುಖ ಅಂಶ. ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಾಣ. ೧,೪೫,೦೦೦ ಮೆಗಾ ಟನ್ ಸ್ಟೀಲ್ ಪ್ಲೇಟ್‌ಗಳ ಬಳಕೆ ವ್ಯವಸ್ಥೆಯ ಅಳವಡಿಕೆ ಅತ್ಯಾಧುನಿಕ ಪ್ರವಾಹ ನಿಯಂತ್ರಣ, ೧೧೦ ಕಿಲೋಮೀಟರ್ ದೂರದಿಂದ ಬೃಹತ್ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು ಸುಮಾರು ೫೦ ಅಂತಸ್ತಿನ ಕಟ್ಟಡದಷ್ಟು ಎತ್ತರಕ್ಕೆ ನೀರು ಪಂಪ್ ಮಾಡಲಾಗುತ್ತದೆ (೪೫೦ ಮೀಟರ್ ಎತ್ತರಕ್ಕೆ ಹರಿಸಿ) ಯೋಜನೆ ಪೂರೈಸಲು ೨.೪ ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ ಎಂದು ತಿಳಿಸಿದರು.
ಈ ಬೃಹತ್ ಯೋಜನೆ ಮಾಡೆಲ್ ಎಂಜಿನಿಯರಿಂಗ್ ಮರ?ವೆಲ್ ಆಗಿದೆ. ಆಗಸ್ಟ್ ೨೦೨೪ ರಿಂದ ಪ್ರಿ ಕಮಿಷನಿಂಗ್ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿತ್ತು. ಎಲ್ಲಾ ರೀತಿಯ ಪರಿಶೀಲನೆ ನಡೆಸಿದ ನಂತರ, ಬೆಂಗಳೂರಿನ ಮೂಲೆ ಮೂಲೆಗಳಿಗೆ ಮನೆ ಮನೆಗೂ ಕಾವೇರಿಯನ್ನು ಹರಿಸುವ ಯೋಜನೆ ಅಂತಿಮಗೊಂಡಿದೆ. ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ. ಇದುವರೆಗೂ ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ ೧೦.೬೪ ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ ಎಂದು ಹೇಳಿದರು.
ಕಾವೇರಿ ೫ನೇ ಹಂತದ ಯೋಜನೆ ಜಾರಿ ಬಳಿಕ ೪ ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ. ಇದರಿಂದ ಜಲಮಂಡಳಿಯ ಆದಾಯ ಹೆಚ್ಚಲಿದೆ ಬೆಂಗಳೂರನ್ನು “ವಾಟರ್ ಸರ್‌ಪ್ಲಸ್ ಮಾಡುವತ್ತ ನಮ್ಮ ದಿಟ್ಟ ಹೆಜ್ಜೆ ಇಟ್ಟಿದೆ.
ಕಾವೇರಿ ೫ ನೇ ಘಟ್ಟ ಯೋಜನೆಯ ಪ್ರಮುಖ ಅಂಶಗಳು: ದೇಶದ ಮೂರನೇ ಅತಿದೊಡ್ಡ ನಗರವಾಗಿರುವ ಬೃಹತ್ ಬೆಂಗಳೂರಿಗೆ ಜೀವಜಲವನ್ನು ಒದಗಿಸುವ ಮಹತ್ವದ ಕಾರ್ಯದಲ್ಲಿ ಬೆಂಗಳೂರು ನೀರು ಸರಬರಾಜು ಹಾಗೂ ಜಲಮಂಡಳಿ ತೊಡಗಿಕೊಂಡಿದೆ. ಶಿಕ್ಷಣ ಕೇಂದ್ರವಾಗಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ನೆಲೆಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ತವರಾಗಿ, ಅತ್ಯಾಧುನಿಕ ಆರೋಗ್ಯ ಸೇವಾ ಕೇಂದ್ರವಾಗಿ ಬೆಂಗಳೂರು ಬೆಳೆದಿದೆ. ಕೇವಲ ೧೫ ವರ್ಷಗಳಲ್ಲಿ ೫೦ ವರ್ಷಗಳಷ್ಟು ಅಭಿವೃದ್ಧಿಯನ್ನು ಕಂಡಿರುವ ಜಗತ್ತಿನ ಕೆಲವೇ ನಗರಗಳಲ್ಲಿ ನಮ್ಮ ಬೆಂಗಳೂರು ಕೂಡಾ ಒಂದು, ದಿನೇ ದಿನೇ ಬೆಳೆಯುತ್ತಿರುವ ನಗರಕ್ಕೆ ಸಮರ್ಪಕ ನೀರು ಸರಬರಾಜು ಹಾಗೂ ಉತ್ತಮ ಕೊಳಚೆ ನೀರು ನಿರ್ವಹಣೆಯ ನಿಟ್ಟಿನಲ್ಲಿ ಹಂತಗಳಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡಿದ್ದೇವೆ.
೧೮೯೬ ನೇ ಇಸವಿಯವರೆಗೆ ಬೆಂಗಳೂರಿನ ನೀರಿನ ಅಗತ್ಯವನ್ನು ಧರ್ಮಾಂಬುಧಿ, ಸಂಪಂಗಿ, ಹಲಸೂರು, ಸ್ಯಾಂಕಿ ಕೆರೆಗಳಂತಹ ಕೆರೆಗಳು ಪೂರೈಸುತ್ತಿದ್ದವು. ಇವಕ್ಕೆ ಪೂರಕವಾಗಿ ಸ್ಥಳೀಯ ಬಾವಿ ಮತ್ತು ಕಲ್ಯಾಣಿಗಳಂತಹ ಜಲಮೂಲಗಳೂ ಇದ್ದವು. ಈ ಮೂಲಗಳಿಂದ ದೊರೆಯುತ್ತಿದ್ದ ನೀರು ಬೆಂಗಳೂರಿನ ಆಗತ್ಯ ಪೂರೈಸಲು ಸಾಲದ್ದರಿಂದ ಹೊಸ ಜಲಸಂಪನ್ಮೂಲದ ಹುಡುಕಾಟ ಆರಂಭವಾಯಿತು. ನಗರದ ಬಳಿಯಿದ್ದ ಆರ್ಕಾವತಿ ನದಿ ಜಲ ಮೂಲವಾಗಬಹುದೆಂದು ತಿಳಿದು ಇಲ್ಲಿಂದ ನಗರಕ್ಕೆ ಸೋಸಿದ ನೀರು ಪೂರೈಸುವ ಕೆಲಸ ೧೮೯೬ ನೇ ವರ್ಷದಲ್ಲಿ ಪ್ರಾರಂಭವಾಯಿತು.
ಬೆಂಗಳೂರಿನ ನಿರಂತರ ಬೆಳವಣಿಗೆ ಮತ್ತು ಜನಸಂಖ್ಯೆಯ ಹೆಚ್ಚಳದಿಂದಾಗಿ ಹೊಸ ಸಂಪನ್ಮೂಲಗಳ ಹುಡುಕಾಟದ ಅವಶ್ಯಕತೆ ಕಂಡು ಬಂದಿತ್ತು. ಆಗ ಹೊಳೆದದ್ದೆ ಕಾವೇರಿ ನದಿಯ ಜಲ ಮೂಲ. ಕಾವೇರಿ ನದಿಯ ನೀರನ್ನು ಬೆಂಗಳೂರಿನ ಬೇಡಿಕೆಗೆ ಬಳಸಿ ಕೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ಹೀಗಾಗಿ ೧೯೭೪ ರಿಂದೀಚೆಗೆ ನೀರು ಪೂರೈಕೆಗಾಗಿ ಕಾವೇರಿ ಜಲಮೂಲವನ್ನು ಹಂತಹಂತವಾಗಿ, ಘಟ್ಟಗಳಲ್ಲಿ ಬಳಸಿ ಕೊಳ್ಳವುದು ಪ್ರಾರಂಭವಾಯಿತು.
ಕಾವೇರಿ ೫ ನೇ ಘಟ್ಟ: ಕಾವೇರಿ ನೀರು ಸರಬರಾಜು ಯೋಜನೆಯ ೪ನೇ ಘಟ್ಟ ೨ ನೇ ಹಂತವನ್ನು ಪೂರ್ಣಗೊಳಿಸಿದ ನಂತರವೂ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟ ೧೧೦ ಹಳ್ಳಿಗಳಿಗೆ ನೀರು ಪೂರೈಸಲು ಮಂಡಳಿಗೆ ಕಷ್ಟವಾಗುತ್ತಿತ್ತು. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ೧೧೦ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ೨,೨೦೦ ಎಂ.ಎಲ್.ಡಿ ನೀರಿನ ಅವಶ್ಯಕತೆಯಿದೆ. ಆದರೆ, ಪ್ರಸ್ತುತ ಇರುವ ನಾಲ್ಕೂ ಹಂತಗಳ ಮೂಲಕ ನಮಗೆ ಲಭ್ಯವಾಗುತ್ತಿರುವುದು ಕೇವಲ ೧೪೫೦ ಎಂ.ಎಲ್.ಡಿಗಳಷ್ಟು ಮಾತ್ರ.
ಬೆಂಗಳೂರು ನಗರದ ಕುಡಿಯುವ ನೀರಿನ ಅವಶ್ಯಕತೆಯಾಗಿ ಈಗಾಗಲೇ ಹಂಚಿಕೆ ಮಾಡಲಾದ ೧೯ ಟಿಎಂಸಿಯ ಜೊತೆಗೆ. ಹೆಚ್ಚುವರಿಯಾಗಿ ೧೦ ಟಿಎಂಸಿ ನೀರು ಪಡೆಯಲು ಅನುಮೋದನೆಯನ್ನು ಪಡೆದುಕೊಳ್ಳಲಾಯಿತು. ನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ ೫ ನೇ ಘಟ್ಟವನ್ನು ೨/೫ ಜಪಾನ್ ಇಂಟರ್‌ನ್ಯಾಷನ್ ಕೋ-ಆಪರೇಷನ್ ಏಜೆನ್ಸಿ – ಜೈಕಾ ಆರ್ಥಿಕ ನೆರವಿನಿಂದ ಯ. ಪ್ರಾರಂಭಿಸಲು ಅಂದಿ ಸರಕಾರ ೨೦೧೪ ರಲ್ಲಿ ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಿತ್ತು.