Saturday, April 19, 2025
Google search engine

Homeರಾಜ್ಯಸುದ್ದಿಜಾಲಮಹಿಳಾ ಸಂಘಗಳು ಆರ್ಥಿಕವಾಗಿ ಸದೃಢಗೊಂಡಾಗ ಗ್ರಾಮೀಣ ಜನತೆಯಲ್ಲಿ ಆರ್ಥಿಕ ಸುಧಾರಣೆ: ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ

ಮಹಿಳಾ ಸಂಘಗಳು ಆರ್ಥಿಕವಾಗಿ ಸದೃಢಗೊಂಡಾಗ ಗ್ರಾಮೀಣ ಜನತೆಯಲ್ಲಿ ಆರ್ಥಿಕ ಸುಧಾರಣೆ: ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ

ವರದಿ : ವಿನಯ್ ದೊಡ್ಡಕೊಪ್ಪಲು

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೆ.ಆರ್.ನಗರ : ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ೮೬ ಮಹಿಳಾ ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು ಚಾಲ್ತಿಯಲ್ಲಿರುವ ೬೮ ಸಂಘಗಳಿಗೆ ೩ ಕೋಟಿ ಸಾಲ ನೀಡಲು ಸಂಘದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ ಹೇಳಿದರು.

ಸಂಘದ ಆಡಳಿತ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳಾ ಸಂಘಗಳು ಆರ್ಥಿಕವಾಗಿ ಸದೃಢಗೊಂಡಾಗ ಗ್ರಾಮೀಣ ಜನತೆಯಲ್ಲಿ ಆರ್ಥಿಕ ಸುಧಾರಣೆಯಾಗಲಿದೆ ಎಂಬ ಕಾರಣದಿಂದ ಸಂಘಗಳಿಗೆ ಸಾಲ ನೀಡಲು ಮುಂದಾಗಿದ್ದೇವೆ ಎಂದರು.

ಸಂಘ ವಿವಿಧ ಕಾರಣಕ್ಕಾಗಿ ೪.೪೩ ಲಕ್ಷ ನಿವ್ವಳ ನಷ್ಟದಲ್ಲಿದ್ದು ಲಾಭದತ್ತ ಕೊಂಡ್ಯೂಯಲ್ಲು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದ ಅಧ್ಯಕ್ಷರು ವಿವಿಧ ಯೋಜನೆಯಡಿಯಲ್ಲಿ ರೈತ ಸದಸ್ಯರುಗಳಿಗೆ ೧೦ ಕೋಟಿ ರೂ ಸಾಲ ನೀಡುವ ಗುರಿ ಹೊಂದಲಾಗಿದೆ ಅರ್ಹ ರೈತರು ಅಗತ್ಯ ದಾಖಲಾತಿ ನೀಡಿ ಸಂಘದಿoದ ಸಾಲ ಸೌಲಭ್ಯ ಪಡೆಯಬೇಕೆಂದು ಮನವಿ ಮಾಡಿದರು.

ಸುಮಾರು ೫೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಘವು ರೈತರ ಅನುಕೂಲಕ್ಕಾಗಿ ಸಾಕಷ್ಟು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಂಘದ ವ್ಯಾಪ್ತಿಗೆ ಒಳಪಡುವ ಬ್ಯಾಡರಹಳ್ಳಿ, ಸಿದ್ದನಕೊಪ್ಪಲು, ಅಡಗನಹಳ್ಳಿ, ಮಧುವನಹಳ್ಳಿ, ಅರೆಕಾಲ್‌ಕೊಪ್ಪಲು, ಬರ‍್ನಹಳ್ಳಿ, ಚನ್ನಪ್ಪನಕೊಪ್ಪಲು ಗ್ರಾಮಗಳಿಂದ ೧೫೧೦ ಮಂದಿ ಷೇರುದಾರ ಸದಸ್ಯರನ್ನು ಹೊಂದಿದ್ದು, ಇನ್ನಷ್ಟು ಮಂದಿ ರೈತರನ್ನು ಷೇರುದಾರರನ್ನಾಗಿ ಮಾಡುವ ಮೂಲಕ ಸಂಘಕ್ಕೆ ಷೇರು ಬಂಡವಾಳ ಹೆಚ್ಚಿಸಿಕೊಳ್ಳುವಂತೆ ಸಂಘದ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಂಘ ಆರ್ಥಿಕವಾಗಿ ವೃದ್ದಿಗೊಳ್ಳಬೇಕಾಗಿರುವ ಕಾರಣಕ್ಕಾಗಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬೇಕು ಇದರ ಜತೆಗೆ ಬಾಕಿ ಉಳಿದಿರುವ ಸಾಲಗಳನ್ನು ವಸೂಲಾತಿ ಮಾಡಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದ ಅಧ್ಯಕ್ಷ ನಾರಾಯಣಸ್ವಾಮಿ ಸಂಘದ ವತಿಯಿಂದ ರಸಗೊಬ್ಬರ ಮಾರಾಟ ಮತ್ತು ಪಡಿತರ ವಿತರಣೆ ಮಾಡಲು ಕ್ರಮ
ಕೈಗೊಳ್ಳಬೇಕು ಆಗ ಸಂಘ ತಾನಾಗಿಯೇ ಆರ್ಥಿಕ ಲಾಭ ಕಾಣಲಿದೆ ಈ ನಿಟ್ಟಿನಲ್ಲಿ ಶಾಸಕ ಡಿ.ರವಿಶಂಕರ್‌ರವರ
ಸಹಕಾರ ಪಡೆದು ಕೆಲಸ ಮಾಡಬೇಕೆಂದು ಸಂಘದ ಸಂಘದ ಸಿಇಒ ಸಚಿನ್‌ಕುಮಾರ್ ಅವರಿಗೆ ತಾಕೀತು ಮಾಡಿದರು.

ಸಂಘದ ಉಪಾಧ್ಯಕ್ಷ ಎಸ್.ನಾಗರಾಜ್, ನಿರ್ದೇಶಕರಾದ ಎನ್.ಸಿ.ಶಿವಣ್ಣ, ಅಶ್ವಥ್‌ಕುಮಾರ್, ಬಸವರಾಜು, ಜಗದೀಶ್, ರಮೆಶ್‌ರಾವ್, ಮಹದೇವಮ್ಮ, ಕುಮಾರಿ, ಅಮಾಸಯ್ಯ, ಕೌಶಲ್ಯ, ಮಮತ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಟಿ.ಉಮೇಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್‌ಕುಮಾರ್, ಸಿಬ್ಬಂದಿಗಳಾದ
ಎಸ್.ಕೆ.ಮಹದೇವ್, ಅಶ್ವಿನಿ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular