ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಷೇರುದಾರ ರೈತರಿಗೆ 4.21 ಕೋಟಿ ರೂ ಬೆಳೆ ಸಾಲವನ್ನು ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಕೆ.ಮಹೇಶ್ ಹೇಳಿದರು.
ಭಾನುವಾರ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆ.ಸಿ.ಸಿ ಸಾಲವಾಗಿ 345 ಲಕ್ಷ, ಸೌದೆ ಸಾಲ 25 ಲಕ್ಷ , ಮಹಿಳಾ ಸಂಘಗಳಿಗೆ 28 ಲಕ್ಷ ಸಾಲ ಸೇರಿದಂತೆ 4.21 ಕೋಟಿ ಸಾಲವನ್ನು ವಿತರಿಸಲಾಗಿದ್ದು ಸಮಘದ ಪ್ರಸುತ್ತ ಸಾಲ ವಸೂಲಾತಿಯಲ್ಲಿ ಶೇ..ರಷ್ಟು ಪ್ರಗತಿಯಲ್ಲಿದೆ ಇದೆ ಎಂದು ತಿಳಿಸಿದರು.
ಸಂಘದ ಷೇರುದಾರ ರೈತರ ಸಹಕಾರ ದಿಂದ 2023-24ನೇ ಸಾಲಿನಲ್ಲಿ ಸಂಘವು 5.15 ಲಕ್ಷ ರೂ ಲಾಭದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ಕೆ.ಸಿ.ಸಿ.ಸಾಲವನ್ನು 8 ಕೋಟಿ ರೂಗಳಿಗೆ ಹೆಚ್ಚಿಸಿ ಸುಸ್ತಿ ಸಾಲವನ್ನು ವಸೂಲಿಯ ಜತಗೆ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅದ್ಯತೆ ನೀಡಲು ಸಂಘದ ಆಡಳಿತ ಮಂಡಳಿ ಮುಂದಾಗಿದೆ ಎಂದರು
ಸಭೆಯಲ್ಲಿ ಸಂಘದ ಅಭಿವೃದ್ಧಿ ಮತ್ತು ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಕೆ.ಬಸವರಾಜು, ಡೈರಿ ಅಧ್ಯಕ್ಷ ಪಾಂಡು, ಸಂಘದ ಮಾಜಿ ಅಧ್ಯಕ್ಷ ಪ್ರೇಮಕುಮಾರ್, ಜವಾರಯ್ಯ, ಸಂಘದ ಮಾಜಿ ಕಾರ್ಯದರ್ಶಿ ಸಿ.ಎ .ಕುಮಾರ್ ಅವರು ಸಲಹೆ ನೀಡಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಸಣ್ಣರಾಮಯ್ಯ, ನಿರ್ದೇಶಕರಾದ ಸಿ.ಎ. ಗಣೇಶ್, ಬೆಣಗನಹಳ್ಳಿ ಬಿ.ಎನ್. ಕೃಷ್ಣಗೌಡ ಹೆಚ್.ಎಸ್. ಅಶೋಕ್ ನಾಮಧಾರಿ, ಜಯಣ್ಣ, ಹೆಚ್.ಎಸ್. ವೆಂಕಟೇಶ್ , ಭಾರತಿ, ಕೆ. ಶ್ವೇತಪಾರ್ಥ , ಎಚ್.ಬಿ. ಗೋವಿಂದರಾಜು, ಕೆ.ಎನ್. ತಮ್ಮೇಗೌಡರು, ನಿಂಗರಾಜು, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲಕೊಪ್ಪಲು ಎನ್. ದಿನೇಶ್, ಸಂಘದ ಸಿಇಓಹೆಚ್.ಎಸ್. ಕೃಷ್ಣಗೌಡ, ಸಿಬ್ಬಂದಿಗಳಾದ ನಾಗರಾಜುಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.