- ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ಅವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು ಮನವಿ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸೆ.26ರಿಂದ ಗ್ರಾಮ ಆಡಳಿತಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ಅನಿರ್ಧಾಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದು ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ಅವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಸೋಮವಾರ ತಹಸೀಲ್ದಾರ್ ನರಗುಂದ ಅವರಿಗೆ ಸಂಘದ ತಾಲೂಕು ಅಧ್ಯಕ್ಷ ಜೆ.ಇ.ಸಂದೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ತಿಂಗಳ ಒಳಗಾಗಿ ಬೇಡಿಕೆ ಈಡೇರಿಸುವಂತೆ ಮನವಿ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಸಂದೇಶ ರವರು ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ(ರಿ) ಬೆಂಗಳೂರು ಇವರ ನಿರ್ದೇಶನದಂತೆ ಸೆ.26 ರಂದು ಕರ್ತವ್ಯಕ್ಕೆ ಗೈರು ಹಾಜರಾಗಿ ಎಲ್ಲಾ ಬಗೆಯ ಮೊಬೈಲ್ ಆಪ್, ವೆಬ್ ಅಪ್ಲಿಕೇಷನ್ ಸ್ಥಗೀತ, ಲೇಖನಿ ಸ್ಥಗೀತಗೊಳಿಸಿ ಬೇಡಿಕೆ ಈಡೇರುವವರೆಗೂ ಮುಷ್ಕರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸದ್ಯ 17 ಮೊಬೈಲ್ ಆಪ್ ಮತ್ತು ಅಪ್ಲಿಕೇಷನ್ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಆಪ್ ಗಳ ಬಳಕೆಗೆ ಲ್ಯಾಪ್ ಟಾಪ್, ಇಂಟರನೆಟ್ ಸೌಲಭ್ಯ ಸಹ ನೀಡಿಲ್ಲ. ಅಲ್ಲದೆ ಕಚೇರಿಯಲ್ಲಿ ಟೇಬಲ್, ಚೇರ್, ಪ್ರೀಂಟರ್, ಇಂಟರನೆಟ್ ಕನೇಕ್ಷನ್ ಗಳ ಮೂಲಭೂತ ಸೌಲಭ್ಯ ಸಹ ಕಲ್ಪಿಸಿಲ್ಲ ಈ ಬಗ್ಗೆ ಸರ್ಕಾರ ಗಮನ ಹರಿಸ ಬೇಕಿದೆ ಎಂದರು.
ಅಲ್ಲದೆ 30 ವರ್ಷದ ಸೇವಾವಧಿ ನಂತ ಪದೋನ್ನತಿ ನೀಡುತ್ತಿದ್ದು, ನಿವೃತ್ತಿ ಅಂಚಿನಲ್ಲಿ ಪದೋನ್ನತಿ ನೀಡದೆ ಬೇಗ ನೀಡಬೇಕು. ಕೆಲಸದ ಅವಧಿಯ ಮುನ್ನಾ ಹಾಗೂ ಕೆಲಸದ ನಂತರ ಅವಧಿಯಲ್ಲಿ ಎಲ್ಲಾ ಬಗೆಯ ಸಭೆಗಳನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ ರುದ್ರಾಕ್ಷಿ, ಗೌರವಾಧ್ಯಕ್ಷ ಪಿ.ಎನ್.ರವೀಂದ್ರರಾವ್,
ಖಜಾಂಜಿ ಮುನಿರೆಡ್ಡಿ, ಕಾರ್ಯದರ್ಶಿ ಶಶಿಕಾಂತ್, ಗ್ರಾಮ ಆಡಳಿತ ಅಧಿಕಾರಿಗಳಾದ ನಾಗರಾಜು, ತುಕಾರಾಂ, ಆರತಿ, ಮೌನೇಶ್ , ಸರಸ್ವತಿ, ಗೌಡರ ಶಿವಕುಮಾರ್ , ಮೇಘ, ಕಾವೇರಿ,
ಪ್ರಿಯ, ರಿಯಾನ, ಅಶ್ವಿನಿ ಸೇರಿದಂತೆ ಮತ್ತಿತರು ಹಾಜರಿದ್ದರು.