Sunday, April 20, 2025
Google search engine

Homeಅಪರಾಧಕಾನೂನುಮುಡಾ ಹಗರಣ: ಈಗಲೂ ಹೇಳ್ತಿದೀನಿ ನಾನು ಯಾವುದೇ ತಪ್ಪು ಮಾಡಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮುಡಾ ಹಗರಣ: ಈಗಲೂ ಹೇಳ್ತಿದೀನಿ ನಾನು ಯಾವುದೇ ತಪ್ಪು ಮಾಡಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ನಾನು ಈಗಲೂ ಹೇಳುತ್ತಿದ್ದೇನೆ ಈ ಒಂದು ಹಗರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಆದೇಶ ಕೊಟ್ಟ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೀನಿ ಅಂತ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ಮೂಲಕ ಸ್ಪಷ್ಟನೆ ನೀಡಿದರು.

ಇಂದು ಮಂಗಳವಾರ ಹೈ ಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಶಾಸಕರ ಖರೀದಿಗೆ ಬಿಜೆಪಿಯವರು ಪ್ರಯತ್ನಿಸಿದ್ದರು ನಮ್ಮ ಶಾಸಕರು ದುಡ್ಡಿನ ಹಿಂದೆ ಬಿದ್ದಿಲ್ಲ ಹೇಗಾದರೂ ಮಾಡಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ.

ನಾವು ೧೩೬ ಸ್ಥಾನ ಗೆದ್ದರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದಾರೆ.ದುಡ್ಡು ಕೊಟ್ಟು ಶಾಸಕರನ್ನು ಸೆಳೆಯುಕ್ಕೆ ಪ್ರಯತ್ನ ಮಾಡಿದ್ದರು ಆದರೆ ನಮ್ಮ ಶಾಸಕರು ಬಿಜೆಪಿಯವರ ಆಮಿಷಕ್ಕೆ ಒಳಗಾಗಲಿಲ್ಲ .ಅಲ್ಲದೆ ನಮ್ಮ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಬೇಕು, ಕಪ್ಪು ಮಸಿ ಬಳಿಯಬೇಕು ಎಂದು ಯತ್ನಿಸಿದ್ದಾರೆ.

ನಮ್ಮ ಸರ್ಕಾರಕ್ಕೆ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಪರೇಷನ್ ಮಾಡಕ್ಕೆ ಆಗಲಿಲ್ಲ. ಅನ್ನಭಾಗ್ಯ ಗ್ರಹಲಕ್ಷ್ಮಿ ಯುವ ನಿಧಿ ಎಲ್ಲವನ್ನು ವಿರೋಧ ಮಾಡಿದರು.ಅವರು ಸಾಮಾಜಿಕ ನ್ಯಾಯ ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪುಮಸಿ ಬಳಿಯುವುದು ಅವರ ದುರಾಲೋಚನೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular