Saturday, April 19, 2025
Google search engine

Homeಅಪರಾಧತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ: ಮಹಿಳೆಯ ಗಂಭೀರ ಆರೋಪ

ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ: ಮಹಿಳೆಯ ಗಂಭೀರ ಆರೋಪ

ಹೈದರಾಬಾದ್: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಪತ್ತೆಯಾಗಿರುವ ವಿಚಾರ ಮಾಸುವ ಮುನ್ನವೇ ತೆಲಂಗಾಣದ ಮಹಿಳಾ ಭಕ್ತೆಯೊಬ್ಬರು ತನಗೆ ನೀಡಲಾದ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆಯಾಗಿರುವುದಾಗಿ ಆರೋಪಿಸಿದ್ದಾರೆ.

ಲಡ್ಡು ಪ್ರಸಾದದಲ್ಲಿ ಕೊಬ್ಬಿನ ಅಂಶ ಇರುವ ಕುರಿತು ಗುಜರಾತ್ ಪ್ರಯೋಗಾಲಯದಲ್ಲಿ ನೀಡಲಾದ ವರದಿಯಲ್ಲಿ ದೃಢಪಟ್ಟಿದ್ದು ಇದೀಗ ಲಡ್ಡು ವಿಚಾರ ಚರ್ಚೆಗೆ ಗ್ರಾಸವಾಗಿದೆ, ಇದರ ನಡುವೆ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವನ್ನೇ ಬಳಸಲು ನಿರ್ಧರಿಸಲಾಗಿದೆ.

ಈ ನಡುವೆ ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮನೆಗೆ ತಂದ ಪ್ರಸಾದದಲ್ಲಿ ಕಾಗದದಲ್ಲಿ ಸುತ್ತಿದ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಪವಿತ್ರ ನೈವೇದ್ಯಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವುದರ ಕುರಿತು ನಡೆಯುತ್ತಿರುವ ವಿವಾದದ ನಡುವೆ ಈ ಘಟನೆ ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.

ಗೊಲ್ಲಗುಡೆಂ ಪ್ರದೇಶದ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿಯಾಗಿರುವ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ತಂಡ ಲಡ್ಡು ಪ್ರಸಾದದಲ್ಲಿ ತಂಬಾಕು ಪತ್ತೆಯಾಗಿದೆ ಎಂದು ವರದಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮಹಿಳೆ ಸೆಪ್ಟೆಂಬರ್ 19 ರಂದು ನೆರೆಹೊರೆಯವರ ಜೊತೆಗೆ ನಾನು ತಿರುಪತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಲಡ್ಡು ಪ್ರಸಾದ ಮನೆಗೆ ತಂದಿದ್ದೆ ಹಾಗೆ ಮನೆ ಮಂದಿಗೆ ಹಂಚಲೆಂದು ಲಡ್ಡು ಪ್ರಸಾದ ತೆರೆದಾಗ ಅದರಲ್ಲಿ ಕಾಗದದಿಂದ ಸುತ್ತಿದ ರೀತಿಯಲ್ಲಿ ತಂಬಾಕಿನ ತುಂಡುಗಳು ಪತ್ತೆಯಾಗಿದೆ ಅಲ್ಲದೆ ತನ್ನ ಮೊಬೈಲ್ ನಲ್ಲಿ ಇದರ ಫೋಟೋ ಕೂಡ ತೆಗೆದಿರುವುದಾಗಿ ಹೇಳಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular