ಹುಣಸೂರು: ಸಾಮಾಜಿಕ ನಾಟಕಗಳಿಂದ ಸಮಾಜದ ಹಲವು ಪಿಡುಗಗಳನ್ನು ದೂರಮಾಡಿ ಸಮಸ್ತ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಿದೆ ಎಂದು ರೋಟರಿ ಕಾರ್ಯದರ್ಶಿ ಹೆಚ್.ಆರ್. ಕೃಷ್ಣಕುಮಾರ್ ತಿಳಿಸಿದರು.
ನಗರದ ಎಸ್ಎಲ್ವಿ ಭವನದಲ್ಲಿ ಹಮ್ಮಿಕೊಂಡಿದ್ದ ನಿರ್ದಿಗಂತ ಶಾಲಾರಂಗ, ಸಮಾಜ ಕಲ್ಯಾಣ ಇಲಾಖೆ,ರೋಟರಿ ಸಂಸ್ಥೆ, ರಂಗಗರಡಿ, ಚೈತನ್ಯ ಬಳಗದ ಸಹಹೋಗದಲ್ಲಿ ಪ್ರಸ್ತುತ ಪಡಿಸಿದ ನಾಟಕ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನೈಜತೆಯ ನಾಟಕಗಳನ್ನು ಅಭಿನಯದ ಮೂಲಕ ಪ್ರಸ್ತುತಪಡಿಸಿದಾಗ ಮಕ್ಕಳು ಮತ್ತು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವ ಸಂದೇಶಗಳು ಪರಿವರ್ತನೆ ತರುವ ಜತೆಗೆ ಹಾಸ್ಟಲ್ನಲ್ಲಿ ಇದ್ದು, ವಿದ್ಯೆ ಕಲಿಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕು ಉಜ್ವಲಗೊಳ್ಳಲಿದೆ ಎಂದರು.
ಚೈತನ್ಯ ಬಳಗದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ರಾಷ್ಟ್ರ ಕವಿ ಕುವೆಂಪು ವಾಣಿಯಂತೆ, ಎಲ್ಲಿಯು ನಿಲ್ಲದಿರು, ಮನೆಯೊಂದನ್ನು ಕಟ್ಟದಿರು ಎಂಬ ಸಂದೇಶದಂತೆ. ನೀವು ಎಲ್ಲಿ ಇರುವಿರೊ ಅಲ್ಲಿ ಹಣ, ಆಸ್ತಿ ಗಳಿಸದೆ ಬದುಕಿಗೆ ಬೇಕಾದ ಪರಿಪೂರ್ಣ ವಿದ್ಯೆ ಕಲಿತು ನಿರ್ದಿಗಂತವಾಗಿರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ನಾಟಕವನ್ನು ನೋಡಿ ಸವಿದ ವಿದ್ಯಾರ್ಥಿಗಳು ತಮ್ಮ ಮೇಲೆ ಪ್ರಭಾವ ಬೀರಿದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಪ್ರಸನ್ನ .ಕೆ.ಪಿ., ಸಹಾಯಕ ಗವರ್ನರ್ ಆರ್.ಆನಂದ್, ರೊ.ಬಸವರಾಜ್, ಯುವ ಸಾಹಿತಿ ಅನುಷ್ ಶೆಟ್ಟಿ, ಹುಣಸೂರಿನ ರಂಗಗರಡಿ ಅಧ್ಯಕ್ಷ ಸುಭಾಷ್, ಅರ್ಜುನ್, ನಿರ್ದಿಗಂತ ಟೀಮಿನ ಗಣೇಶ್ ಇದ್ದರು.