Saturday, April 19, 2025
Google search engine

Homeಸ್ಥಳೀಯಹಿನಕಲ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 90 ಸಾವಿರ ಲಾಭ

ಹಿನಕಲ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 90 ಸಾವಿರ ಲಾಭ

ಮೈಸೂರು: ಹಿನಕಲ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ೨೦೨೩-೨೪ನೇ ಸಾಲಿನಲ್ಲಿ ೯೦,೪೦೦/- ರೂ. ಲಾಭ ಬಂದಿದೆಎಂದು ಸಂಘದಅಧ್ಯಕ್ಷ ನೀಲಕಂಠಪ್ಪ ತಿಳಿಸಿದರು.

ಹಿನಕಲ್‌ನ ನಿಂಗಾಮಣಿ ನೀಲಕಂಠಪ್ಪಛತ್ರದಲ್ಲಿ ನಡೆದ ಹಿನಕಲ್ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದಅವರು ಸಂಘವು ಪ್ರಾರಂಭವಾಗಿಒಂದು ವರ್ಷವಾಗಿದ್ದು, ೧೧೦ ಜನ ಷೇರುದಾರರಿದ್ದಾರೆ. ರೈತರಿಂದ ೨೮,೭೭,೩೭೮.೬೭ ರೂ. ನ ಹಾಲನ್ನುಖರೀದಿ ಮಾಡಲಾಗಿದೆ. ರೈತರುಇನ್ನೂ ಹೆಚ್ಚು ಹಸುಗಳನ್ನು ಸಾಕುವುದರ ಮೂಲಕ ಡೈರಿಗೆ ಹೆಚ್ಚು ಹಾಲನ್ನು ಹಾಕಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಸಭೆಯಲ್ಲಿ ಸಂಘದಉಪಾಧ್ಯಕ್ಷರಾದ ನಾಗರಾಜು, ನಿರ್ದೇಶಕರಾದಜನಾರ್ಧನ್ ಹೆಚ್.ಡಿ., ವೆಂಕಟೇಶ್ ಹೆಚ್.ಜೆ., ರಮೇಶ್‌ಆರ್.ಜೆ., ಹೊನ್ನಪ್ಪಎಸ್., ಬೀರಪ್ಪ, ರಾಜು ಹೆಚ್.ಸಿ., ಗುರುಸ್ವಾಮಿ ಹೆಚ್.ಪಿ., ಬೆಟ್ಟಯ್ಯ, ವೆಂಕಟೇಶ್, ಸರಸ್ವತಿ, ರಾಧಿಕಾ ಸಿ.ಎಸ್., ವಿಸ್ತರಣಾಧಿಕಾರಿ ಪರಮೇಶ್, ಮುಖ್ಯಕಾರ್ಯನಿರ್ವಾಹಕ ಪ್ರಶಾಂತ್ ಹೆಚ್.ಜೆ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿಡೈರಿಗೆ ಹೆಚ್ಚು ಹಾಲು ಹಾಕಿದ ನಾಲ್ವರನ್ನುಅಭಿನಂದಿಸಲಾಯಿತು.

RELATED ARTICLES
- Advertisment -
Google search engine

Most Popular