Sunday, April 20, 2025
Google search engine

Homeರಾಜ್ಯಸುದ್ದಿಜಾಲಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ೯.೯೩ ಲಕ್ಷ ರೂಗಳ ನಿವ್ವಳ ಲಾಭ

ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ೯.೯೩ ಲಕ್ಷ ರೂಗಳ ನಿವ್ವಳ ಲಾಭ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘ ೯೮ ವರ್ಷಗಳನ್ನು ಪೂರೈಸಿದ್ದು ೧೮.೧೪
ಲಕ್ಷ ಷೇರು ಬಂಡವಾಳ ಹೊಂದಿದೆ ಈ ಸಾಲಿನಲ್ಲಿ ೯.೯೩ ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಎಂದು
ಉಪಾಧ್ಯಕ್ಷ ಮೋಹನರಾವ್ ಹೇಳಿದರು.

ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ
ಮಾತನಾಡಿದ ಅವರು ಸದಸ್ಯರಿಗೆ ಶೇ.೧೦ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ
ಎಂದರು.

ಸಂಘದ ಆರ್ಥಿಕ ವ್ಯವಹಾರಗಳನ್ನು ಡಿಜಿಟೀಕರಣ ಗೊಳಿಸಲಾಗಿದ್ದು ಸದಸ್ಯರು ಹಾಲಿ ವಿಳಾಸ, ಆಧಾರ್
ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಮೊಬೈಲ್ ನಂಬರ್ ಅನ್ನು ಸಂಘದ ಸಿಬ್ಬಂದಿಗಳಿಗೆ ನೀಡಬೇಕು ಇದರ
ಜತೆಗೆ ತಮಗೆ ಬಂದಿರುವ ಡಿವಿಡೆಂಟ್ ಹಣವನ್ನು ಮೂರು ವರ್ಷದೊಳಗೆ ಪಡೆದುಕೊಳ್ಳಬೇಕು
ಇಲ್ಲದಿದ್ದರೆ ಬೈಲಾ ಪ್ರಕಾರ ರಿಸರ್ವ್ ಫಂಡ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಂಘದಿoದ ಪಡೆದಂತ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದು ಎಲ್ಲರ ಜವಬ್ದಾರಿ ಇದರಿಂದ
ಸಂಘಕ್ಕೆ ಲಾಭವಾಗುವುದರ ಜತೆಗೆ ಇತರ ಸದಸ್ಯರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ ಎಂದು ಹೇಳಿದ ಉಪಾಧ್ಯಕ್ಷರು ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ದಿಸಲು ಕನಿಷ್ಠ ೨೦ ಸಾವಿರದವರೆಗೆ ವ್ಯವಹಾರ ಮಾಡಿ, ಸಂಘದ ನಿಯಾಮಾನುಸಾರ ಠೇವಣಿ ಇಡಬೇಕೆಂದು ಮನವಿ
ಮಾಡಿದರು.

ಇದೇ ಸಂಧರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ವೈ.ಆರ್.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ದೇಶಕರಾದ ಕೆ.ಎಸ್.ಚಿಕ್ಕವೀರಪ್ಪ, ಎನ್.ಎಂ.ಪ್ರಕಾಶ್, ಕೆ.ಸಿ.ನಾಗರಾಜು, ಸುಭಾಷ್, ಕೆ.ಎಲ್.ರಾಜೇಶ್, ಸಿ.ಎಂ.ಶಶಿಕಲಾ, ಕೃಷ್ಣಯ್ಯ, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಬಿ.ಡಿ.ರೇಣುಕಾಪ್ರಸನ್ನ, ಸಿಬ್ಬಂದಿಗಳಾದ ವಿಶ್ವನಾಥ್, ಕವಿತಾ ಹಾಜರಿದ್ದರು.

RELATED ARTICLES
- Advertisment -
Google search engine

Most Popular