ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಟಿಎಪಿಸಿಎಂಎಸ್ ಆಡಳಿತ ಮಂಡಳಿ ಸೆ.೨೩ರಂದು ಸೋಮವಾರ ನಡೆದ ಆಡಳಿತ ಮಂಡಳಿ
ಸಭೆಯಲ್ಲಿ ಅಮಿತ್.ವಿ.ದೇವರಹಟ್ಟಿ ಮತ್ತು ಡಿ.ಎಸ್.ಯೋಗೀಶ್ ಅವರನ್ನು ನಾಮ ನಿರ್ದೇಶನ ಮಾಡಿಕೊಂಡಿತ್ತು ಇದಕ್ಕೆ ಕಾಂಗ್ರೆಸ್ ಮುಖಂಡ ದೂರು ನೀಡಿದ ಹಿನ್ನೆಲೆಯಲ್ಲಿ ಮೈಸೂರು ಸಹಕಾರ
ಸಂಘಗಳ ಉಪ ನಿಬಂಧಕರ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಕಾಂಗ್ರೆಸ್ ಮುಖಂಡರಾದ ಹೆಚ್.ಪಿ.ಪ್ರಶಾಂತ್, ತೋಟಪ್ಪನಾಯಕ, ಎಸ್.ಸಿದ್ದೇಗೌಡ ಅವರು ಮೈಸೂರು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ಕೋರಂ ಅಭಾವವಿದ್ದರೂ ಕೇವಲ ೬ ಮಂದಿ ನಿರ್ದೆಶಕರ ಆಡಳಿತ ಮಂಡಳಿ ನಾಮ ನಿರ್ದೇಶನ ಮಾಡಿಕೊಂಡಿರುವುದನ್ನು ರದ್ದುಪಡಿಸುವಂತೆ ಮನವಿ ಮಾಡಿರುವುದರಿಂದ ಸೆ.೨೪ರಂದು ಮೈಸೂರು ಸಹಕಾರ ಸಂಘಗಳ ಉಪ ನಿಬಂಧಕ ಆರ್.ಮಂಜುನಾಥ್ ತಾತ್ಕಾಲಿಕ ಆದೇಶ ನೀಡಿ ತಡೆಯಾಜ್ಞೆ ನೀಡಿದ್ದಾರೆ.