Saturday, April 19, 2025
Google search engine

Homeರಾಜ್ಯಸುದ್ದಿಜಾಲಪತ್ರಿಕೆಗಳ ಪ್ರಸಾರದ ಜೀವಾಳ ವಿತರಕರು: ಸುರೇಶ್ ಎನ್ ಋಗ್ವೇದಿ

ಪತ್ರಿಕೆಗಳ ಪ್ರಸಾರದ ಜೀವಾಳ ವಿತರಕರು: ಸುರೇಶ್ ಎನ್ ಋಗ್ವೇದಿ

  • ಹಿರಿಯಾ ಪತ್ರಿಕ ವಿತರಕರಿಗೆ ಸನ್ಮಾನ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಂಪರೆಯ ಬೆಳವಣಿಗೆಯಲ್ಲಿ ಪತ್ರಿಕೆಗಳು ಶತಮಾನ ಗಳಿಂದ ಶ್ರಮಿಸುತ್ತಿವೆ. ಪತ್ರಿಕೆಗಳ ಪ್ರಸಾರದ ಜೀವಾಳವೆ ವಿತರಕರು.ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುತ್ತಿರುವ ವಿತರಕರಿಗೆ ಸಮಾಜ ,ಸಂಘ ಸಂಸ್ಥೆಗಳು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಪತ್ರಿಕೆಗಳು ಮತ್ತು ವಿತರಕರ ಕೊಡುಗೆಗಳು, ಹಿರಿಯಾ ಪತ್ರಿಕ ವಿತರಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪತ್ರಿಕೆಗಳ ಮಾಲೀಕತ್ವ ,ಸಂಪಾದಕತ್ವ, ಪತ್ರಕರ್ತರ ಶ್ರಮದ ಜೊತೆಗೆ ವಿತರಕರ ಪಾತ್ರ ಅಮೂಲ್ಯವಾದದ್ದು. ಓದುಗರಿಗೆ ಪತ್ರಿಕೆಯ ಪ್ರೀತಿ ,ಅಭಿಮಾನ, ಮೂಡುವಂತೆ ಸರಿಯಾದ ಸಮಯಕ್ಕೆ ಪತ್ರಿಕೆಯನ್ನು ತಲುಪಿಸುವ ಮೂಲಕ ಸ್ನೇಹತ್ವ, ಸಹೋದರತೆ ,ವಿಶ್ವಾಸದ ಪ್ರತೀಕವಾಗಿರುವ ವಿತರಕರ ಕಾರ್ಯ ತಪಸ್ಸಿನಂತೆ. ವಿತರಕರ ಪ್ರಭಾವದಿಂದಲೂ ಕನ್ನಡ ಪತ್ರಿಕೆಗಳು ಹೆಚ್ಚು ಪ್ರಸಾರವಾಗಲು ಸಾಧ್ಯವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮವಾಗಿ ವಿತರಕರ ಕೊಡುಗೆಗಳ ಬಗ್ಗೆ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸಂತೋಷವನ್ನುಂಟು ಮಾಡಿದೆ ಹಾಗೂ ಹಿರಿಯ ಪತ್ರಿಕಾ ವಿತರಕರಾದ ಸತ್ಯಪ್ಪ ಹಾಗೂ ಎಮ್ ಲಿಂಗಪ್ಪರವರನ್ನು ಗೌರವಿಸಿರುವುದು ಆತ್ಮ ಸಂತೋಷವನ್ನುಂಟು ಮಾಡಿದೆ. ಪತ್ರಿಕೆಗಳು ಪ್ರಜಾಪ್ರಭುತ್ವದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ ಮಂಗಳೂರು ಸಮಾಚಾರ ದಿಂದ ಆರಂಭವಾಗಿ ವೀರಕೇಸರಿ, ಕರ್ನಾಟಕ ವೈಭವ, ಸಾಧ್ವಿ , ಸೇರಿದಂತೆ ನೂರಾರು ಪತ್ರಿಕೆಗಳು ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಪರಿಣಾಮಕಾರಿಯಾಗಿ ಕನ್ನಡ ಪತ್ರಿಕೆಗಳು ಓದುಗರನ್ನು ಮುಟ್ಟುತ್ತಿವೆ. ವಿತರಣೆಯ ಕಾರ್ಯ ಮಾಡುತ್ತಿರುವ ಎಲ್ಲ ವಿತರಕರಿಗೂ ನಾಡಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಸಲ್ಲಿಸಿ ಉದ್ಘಾಟನೆ ನೆರವೇರಿಸಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ಧಾನೇಶ್ವರಿ ಮಾತನಾಡಿ ಪತ್ರಿಕಾ ವಿತರಕರ ಕಾರ್ಯ ತುಂಬಾ ಶ್ರಮದ ಕಾಯಕ. ವಿತರಕರು ಪ್ರಾತಃಕಾಲದಿಂದ ರಾತ್ರಿಯವರೆಗೂ ನಿರಂತರವಾಗಿ ಪತ್ರಿಕಾ ಸೇವೆಯ ಕಾರ್ಯದಲ್ಲಿ ತೊಡಗಿರುತ್ತಾರೆ. ಪತ್ರಿಕಾ ವಿತರಕರಿಗೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವೈಯಕ್ತಿಕ ಆರೋಗ್ಯ ಸಮಾಜದ ಆರೋಗ್ಯ ಬಹಳ ಮುಖ್ಯವಾದದ್ದು.

ಪತ್ರಿಕಾ ವಿತರಣೆಯ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಸಂಪೂರ್ಣವಾದ ರಕ್ಷಣೆ ಬಹಳ ಮುಖ್ಯವಾದದ್ದು. ವೈಯಕ್ತಿಕ, ಕುಟುಂಬದ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿ ಇದೆ. ಅವರ ಸೇವ ಕಾರ್ಯವನ್ನು ಗುರುತಿಸುವ ಹಾಗೂ ವಿಶೇಷ ಕಾರ್ಯ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ ಎಂದರು. ವಿತರಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ ,ಯೋಗ ,ಪ್ರಾರ್ಥನೆಯನ್ನು ಪ್ರತಿನಿತ್ಯ ನಿರ್ವಹಿಸಬೇಕೆಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಋಗ್ವೇದಿಯವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ,ಕನ್ನಡ ಪತ್ರಿಕೋದ್ಯಮ ಹಾಗೂ ಪತ್ರಿಕ ವಿತರಕರ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಿ ಹಿರಿಯ ವಿತರಕರನ್ನು ಗೌರವಿಸುತ್ತಿರುವುದು ಶ್ರೇಷ್ಠ ಕಾರ್ಯ ಎಂದರು.

ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಪುರುಷೋತ್ತಮ್ ಮಾತನಾಡಿ ವಿತರಕರ ಸೇವೆಗೆ ಸರ್ಕಾರ ಪೂರ್ಣ ರಕ್ಷಣೆ ಹಾಗೂ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು .ಜಿಲ್ಲಾಡಳಿತ ವಿಶೇಷ ಗಮನವನ್ನು ಹರಿಸಬೇಕು. ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ , ವಿಶೇಷ ಸಂದರ್ಭಗಳಲ್ಲಿ ಗೌರವಿಸುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕ ವಿತರಕರ ಕೊಡುಗೆಗಳು ಹಾಗೂ ಹಿರಿಯ ವಿತರಕರನ್ನು ಗೌರವಿಸುವ ಕಾರ್ಯ ಮಾಡಿರುವುದು ಅಭಿನಂದನೀಯವೆಂದರು.

ಹಿರಿಯ ಪತ್ರಿಕಾ ವಿತರಕರಾದ ಸತ್ಯಪ್ಪ ಹಾಗು ಲಿಂಗಪ್ಪ ರವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಹಾಗೂ ಉಪನ್ಯಾಸಕರಾದ ಮೂರ್ತಿ ಆರ್, ಬಿಕೆ ಆರಾಧ್ಯ ,ಶಿವಲಿಂಗ ಮೂರ್ತಿ, ಸರಸ್ವತಿ, ಪದ್ಮ ಪುರುಷೋತ್ತಮ್, ಪರಮೇಶ್ವರಪ್ಪ ,ತಾಂಡವಮೂರ್ತಿ, ಜಿಲ್ಲಾ ಪತ್ರಿಕಾ ವಿತರಕರ ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಸಹಕಾರ್ಯದ ಶ್ರೀ ಶಿವಲಿಂಗ ಮೂರ್ತಿ , ಬದನಗುಪ್ಪೆ ಮಲ್ಲಣ್ಣ, ಸಿದ್ದಲಿಂಗ ಮೂರ್ತಿ, ಟಿ ಕೆ ಮಹಾದೇವ , ವಿಘ್ನೇಶ್ ,,ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular