ಮೈಸೂರು:ಗೋಪಾಲಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ೨೦೨೩-೨೪ ನೇ ಸಾಲಿನಲ್ಲಿ ೬,೦೮,೯೦೮ ರೂಲಾಭವಾಗಿದೆ ಎಂದು ಅಧ್ಯಕ್ಷ ಗೋವಿಂದೇಗೌಡ ತಿಳಿಸಿದರು.
ಮೈಸೂರು ತಾಲ್ಲೂಕು, ಗೋಪಾಲಪುರದಲ್ಲಿ ನಡೆದ ಗೋಪಾಲಪುರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರುಈ ವರ್ಷರೈತರಿಂದ೨,೫೧,೦೮,೬೦೬ರೂ. ನ ಹಾಲನ್ನು ಖರೀದಿಸಿ ೨೬೧೬೮೫೩೬ ರೂಗೆಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದ್ದೇವೆ. ರೈತ ಕಲ್ಯಾಣ ಟ್ರಸ್ಟ್ ವತಿಯಿಂದಅಕಾಲಿಕ ಮರಣಕ್ಕೆ ತುತ್ತಾದ ಸದಸ್ಯರಿಗೆ ೧೫ ಸಾವಿರ ರೂ.ಗಳನ್ನು ನೀಡಲಾಗುತ್ತದೆ ಎಂದರು.
ಮೈಮುಲ್ ನಿರ್ದೇಶಕಬಿ. ಗುರುಸ್ವಾಮಿ ಮಾತನಾಡಿ ನಮ್ಮ ಸಂಘಕ್ಕೆ ಪ್ರತಿದಿನ ೨೭೬ ಜನರೈತರು ೨೮೦೦ ಲೀಟರ್ ಹಾಲನ್ನು ನೀಡುತ್ತಿದ್ದಾರೆ. ಪ್ರತಿಯೊಬ್ಬ ರೈತರು ಹಸುಗಳಿಗೆ ಇನ್ಶೂರೆನ್ಸ್ ಮಾಡಿಸಬೇಕು. ಹಾಲು ಒಕ್ಕೂಟ ಶೇ ೬೦% ಹಣವನ್ನು ಇನ್ಶೂರೆನ್ಸ್‌ಗೆ ಕಟ್ಟುತ್ತದೆ ಉಳೀದ ೪೦% ಹಣವನ್ನು ಫಲಾನುಭವಿ ನೀಡಬೇಕು. ಹಾಲು ಒಕ್ಕೂಟದಲ್ಲಿ ಅನಗತ್ಯ ಖರ್ಚುವೆಚ್ಚ ಕಡಿಮೆಮಾಡಲು ಕ್ರಮಕೈ ಗೊಂಡಿದ್ದೇವೆ. ಗೋಪಾಲಪುರದಲ್ಲಿ ೧ ವರ್ಷದೊಳಗೆ ಸುಸಜ್ಜಿತಪಶು ‘ಆಸ್ಪತ್ರೆ’ ನಿರ್ಮಾಣವಾಗಲಿದೆಎಂದರು.
ಸಭೆಯಲ್ಲಿಮೈಮುಲ್‌ನಿರ್ದೇಶಕರಾದಕೆ. ಉಮಾಶಂಕರ್, ಲೀಲಾ ನಾಗರಾಜು ಸಂಘದಉಪಾಧ್ಯಕ್ಷರಾದ ಮಾದೇಗೌಡ, ನಿದೇರ್ಶಕರುಗಳಾದ ಜಿ.ಎಂ ವಿಶ್ವನಾಥ್, ಭೈರೇಗೌಡ, ಈಶ್ವರರವಿರಾಜು, ಜಿ.ಕೆಹನುಮಂತ, ಜೆ.ಸಿ ಮಹೇಶ್‌ಸಣ್ಣಸ್ವಾಮಿ, ಚಂದ್ರಮ್ಮಸುಮತಿ, ಸುರೇಶ್‌ಮುಖ್ಯಕಾರ್ಯನಿರ್ವಾಹಕ ಸುರೇಶ್, ಸಿಬ್ಬಂದಿಗಳಾದ ಬಸವರಾಜು,ರಾಘವೇಂದ್ರ, ಯೋಗೇಶ್, ಸಿದ್ದರಾಜು ಹಾಜರಿದ್ದರು.