Sunday, April 20, 2025
Google search engine

Homeಸ್ಥಳೀಯಜಯದೇವದಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿ : ಡಾ. ಕೆ.ಎಸ್. ರವಿಂದ್ರನಾಥ್

ಜಯದೇವದಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿ : ಡಾ. ಕೆ.ಎಸ್. ರವಿಂದ್ರನಾಥ್

ಮೈಸೂರು: ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಎರಡು ದಿನ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಗಾರಯ ಶಸ್ವಿಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತುವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌ರವೀಂದ್ರನಾಥ್ ತಿಳಿಸಿದರು.

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಅಮೇರಿಕಾದ ಡಾ. ಜಿ.ಸುಬ್ರಮಣಿಹಾರ್ಟ್ ಫೌಂಡೆಶನ್‌ ಮೆಡ್‌ಟ್ರೋನಿಕ್‌ಯು.ಎಸ್.ಎ. ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಸಂಯುಕ್ತಆಶ್ರಯದಲ್ಲಿ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಅವರು ಪ್ರತಿವರ್ಷ ನಮ್ಮಆಸ್ಪತ್ರೆಯಲ್ಲಿ ಬಡವರು, ನಿರ್ಗತಿಕರಿಗಾಗಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ನಡೆಸುತ್ತಾ ಬಂದಿದ್ದೇವೆ.

ಅದರಂತೆ ಈ ವರ್ಷಬೆಂಗಳೂರು ಜಯದೇವಆಸ್ಪತ್ರೆಯಲ್ಲಿ೨೦೦ ಜನಹೃದಯರೋಗಿಗಳಿಗೆ ಮೈಸೂರುಆಸ್ಪತ್ರೆಯಲ್ಲಿ೫೦ ಜನರೋಗಿಗಳಿಗೆ ೪೦ ಲಕ್ಷರೂ. ಬೆಲೆ ಬಾಳುವ ೭೦ ಸ್ಟಂಟ್‌ಗಳನ್ನು ಅಳವಡಿಸಿ ಉಚಿತಚಿಕಿತ್ಸೆನೀಡಿದ್ದೇವೆಎಂದಅವರುಪ್ರತಿ ದಿನ ಹೃದಯರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ದಿನಕ್ಕೆ ೮೦೦ ಜನಹೊರರೋಗಿಗಳು ಬಂದುಚಿಕಿತ್ಸೆ ಪಡೆಯುತ್ತಿದ್ದಾರೆ.

ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿಯಮಿತ ಆಹಾರ ಸೇವನೆ ಮಾಡುವುದರೊಂದಿಗೆವ್ಯಾಯಾಮ ಮಾಡಬೇಕು ಎಂದರು.

ಈ ಸಂದರ್ಭದಲ್ಲಿವೈದ್ಯಕೀಯಅಧೀಕ್ಷಕಡಾ.ಕೆ.ಎಸ್ ಸದಾನಂದ, ಡಾ. ಜಿ. ಸುಬ್ರಮಣಿ, ಡಾ. ದಿನಶ್, ಡಾ.ರಜಿತ್, ಡಾ. ದೇವರಾಜ, ಡಾ. ಸಚಿನ್‌ರಾವ್, ಡಾ. ಮಂಜುನಾಥ, ಡಾ. ಜಯಪ್ರಕಾಶ್, ಡಾ. ಶಿವಸ್ವಾಮಿಸೋಸಲೆ, ಹರೀಶಕುಮಾರ್, ಗುರುಮೂರ್ತಿ, ವಾಣಿಮೋಹನ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular