Saturday, April 19, 2025
Google search engine

Homeರಾಜ್ಯಮುಂಬೈನಲ್ಲಿ ಭಾರೀ ಮಳೆ: ನಾಲ್ವರು ಸಾವು: ರೆಡ್ ಅಲರ್ಟ್

ಮುಂಬೈನಲ್ಲಿ ಭಾರೀ ಮಳೆ: ನಾಲ್ವರು ಸಾವು: ರೆಡ್ ಅಲರ್ಟ್

ಪುಣೆ: ಮುಂಬೈನಲ್ಲಿ ಭಾರೀ ಮಳೆಯ ಪರಿಣಾಮ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ ಹೊತ್ತಿನಲ್ಲಿ ಮಳೆ ಆರಂಭಗೊಂಡಿದ್ದು, ೫ ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ ೨೦೦ ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿದೆ.

ಇಂದು ಗುರುವಾರ ಬೆಳಗ್ಗೆ ೮:೩೦ ರವರೆಗೆ ರೆಡ್ ಅಲರ್ಟ್ ಇರುವ ಹಿನ್ನೆಲೆಯಲ್ಲಿ ಮುಂಬೈ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಯಾಣಿಕರು ರಸ್ತೆಗಳಲ್ಲಿ, ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಗಂಟೆಗಟ್ಟಲೆ ಪರಾಡುವಂತಾಗಿದೆ. ಕಲ್ಯಾಣ್‌ನ ವರಪ್ ಗ್ರಾಮದಲ್ಲಿ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಖೋಪೋಲಿಯ ಜೆನಿತ್ ಜಲಪಾತದ ಬಳಿ ಮತ್ತೋರ್ವ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇಂದು ಕೂಡ ಮೋಡ ಕವಿದ ವಾತಾವರಣವಿದ್ದು, ಭಾರೀ ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

RELATED ARTICLES
- Advertisment -
Google search engine

Most Popular