ಚನ್ನಪಟ್ಟಣ: ಶಾಂತಿ, ಸಹಬಾಳ್ವೆ ಪಠಿಸುವ ಜೈನ ಮುನಿಗಳನ್ನು ಭೀಕರವಾಗಿ ಹತ್ಯ ಮಾಡಿರುವ ಆರೋಪಿಗಳ ಹೆಡೆಮುರಿಕಟ್ಟಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.
ಚಿಕ್ಕೋಡಿ ತಾಲೂಕಿನ ನಂದಿ ಆಶ್ರಮದ ಜೈನ ಮುನಿ ಕಾಮ ಕುಮಾರನಂದಿ ಅವರ ಹತ್ಯೆ ಖಂಡಿಸಿ ಕಕಜವೇ ಸಂಘಟನೆಯಿ0ದ ಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಜೈನಮುನಿಗಳ ಹತ್ಯೆ ತುಂಬಾ ಅಮಾನವೀಯವಾಗಿದ್ದು, ಯಾರ ತಂಟೆಗೂ ಹೋಗದ ಯಾರನ್ನು ನೋಯಿಸದ ಜೈನ ಮುನಿಗಳನ್ನು ಘೋರವಾಗಿ ಹತ್ಯ ಮಾಡುವ ಜೊತೆಗೆ ದೇಹವನ್ನು ಹತ್ತಾರು ತುಂಡು ಮಾಡಿ ಪೈಶಾಚಿಕ ಕೃತ್ಯ ಮಾಡಿರುವುದು ಅಮಾನವೀಯ ಘಟನೆಯಾಗಿದೆ. ಇಂತಹವನ್ನು ಬಿಟ್ಟರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸ್ನೇಹಬಾತೃತ್ವದ, ಸಹಬಾಳ್ವೆಯ ಸಂದೇಶದ ಮೌಲ್ಯಗಳೆ ಇಲ್ಲವಾಗಿ ಎಲ್ಲಡೆ ಕ್ರೌರ್ಯವೇ ತುಂಬುತ್ತದೆ. ಈ ನಿಟ್ಟಿನಲ್ಲಿ ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಕೃತ್ಯದಲ್ಲಿ ಪಾಲ್ಗೊಂಡವರು ಸೇರಿದಂತೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂಬ್ರಿಡ್ಜ್ ಕಾಲೇಜಿನ ಪ್ರಾಂಶುಪಾಲರಾದ ನಿಂಗೇಗೌಡರು(ಎನ್‌ಜಿ) ಮಾತನಾಡಿ, ನಮ್ಮ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆಯುತ್ತಾರೆ. ಆದರೆ ಜೈನ ಮುನಿಗಳನ್ನು ಭೀಕರವಾಗಿ ಹತ್ಯೆ ಮಾಡಿರುವುದನ್ನು ಗಮನಿಸಿದರೆ ನಾವು ಇಂತಹ ಸಮಾಜದಲ್ಲಿ ಹುಟ್ಟಿದ್ದೀವಾ ಎಂಬ ಬೇಸರ ಮೂಡುತ್ತದೆ. ಸಮಾಜದಲ್ಲಿ ಎಲ್ಲಾ ಧರ್ಮಗಳು ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದು ಅದೇ ರೀತಿ ಜೈನ ಮುನಿಗಳು ಸಮಾಜದಲ್ಲಿ ಸರ್ವ ಸಂಘ ಪರಿತ್ಯಾಗಿಯಾಗಿ ಶಾಂತಿ ಪ್ರತಿಪಾದನೆ ಮಾಡುತ್ತಾ ಬಂದಿದ್ದು, ಇಂತಹ ಹತ್ಯೆ ಖಂಡನೀಯವಾಗಿದ್ದು ಈ ಪ್ರಕರಣದಲ್ಲಿ ಸಮಗ್ರ ತನಿಖೆ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಜೈನ ಸಮುದಾಯದ ರಾಜುಅವರು ಮಾತನಾಡಿ, ಉಡುವ ಬಟ್ಟೆಯಿಂದ ಹಿಡಿದು ರುಚಿಕರ ಊಟ ಸೇರಿದಂತೆ ತಮ್ಮ ಜೀವನದಲ್ಲಿ ಪ್ರತಿಯೊಂದನ್ನು ತ್ಯಾಗ ಮಾಡಿರುವ ಜೈನ ಮುನಿಗಳನ್ನು ಇಷ್ಟೊಂದು ಭೀಕರವಾಗಿ ಹತ್ಯೆ ಮಾಡುವವರು ಇದ್ದಾರೆ ಎಂದರೆ ಸಮಾಜದಲ್ಲಿ ಹಣ ಆಸ್ತಿ ಹೊಂದಿರುವರ ಪಾಡೇನು ಎಂಬುದನ್ನು ಸರ್ಕಾರ ಪರಿಗಣಿಸಿಬೇಕಿದೆ. ಜೈನ ಮುನಿಯೊಬ್ಬರನ್ನು ಇಷ್ಟೊಂದು ಪೈಶಾಚಿಕವಾಗಿ ಕೃತ್ಯವೆಸಗಿ ಹತ್ಯೆ ಮಾಡಿದ್ದಾರೆ ಎಂದರೆ ಸಾಮಾನ್ಯರ ಪಾಡೇನು ಈ ನಿಟ್ಟಿನಲ್ಲಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕಿ ರಾಧಿಕಾರವಿಕುಮಾರ್‌ಗೌಡ ಮಾತನಾಡಿ, ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂಬ ನಿಟ್ಟಿನಲ್ಲಿ
ಮುನಿಗಳು, ಸ್ವಾಮೀಜಿಗಳು, ಗುರುಗಳು ಜ್ಯೋತಿ ಸ್ವರೂಪರಾಗಿ ಹುಟ್ಟುತ್ತಾರೆ . ಚರಿತ್ರೆಯಲ್ಲಿ ಇವರು ಜೀವಿಸಿದ್ದು ಕಡಿಮೆ ಅವಧಿಯೇ ಆಗಿದ್ದು, ಇವರೆಲ್ಲಾ ತಮ್ಮ ಸುಖವನ್ನು ತ್ಯಾಗ ಮಾಡಿ ಸಮಾಜದ ಜನರಲ್ಲಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಿಸಲು ಶರೀರದ ರೂಪದಲ್ಲಿ ಬರುತ್ತಾರೆ. ಇವರು ಸಮಾಜಕ್ಕಾಗಿ, ನಮಗೋಸ್ಕರ ಜೀವನ ಮಾಡುವವರನ್ನು ಕಾಪಾಡಿಕೊಳ್ಳುವುದು ಸಮಾಜದ ಕರ್ತವ್ಯವಾಗಿದೆ.
ಮುನಿಗಳು, ಸ್ವಾಮೀಜಿಗಳು, ಗುರುಗಳು ಸಮಾಜದಲ್ಲಿ ಸಂಸ್ಕಾರ ಉಳಿಸಲು ಬಂದವರು ಇವರ ವಾಸಸ್ಥಾನ ನಂಬಿಕೆಯಿAದ ಕೂಡಿ ಸ್ವಚ್ಚ್ಚಕೇಂದ್ರಗಳಾಗಿರುತ್ತದೆ. ಆದರೆ ಇಂತಹ ಸ್ವಚ್ಚಾಕೇಂದ್ರಗಳನ್ನು ಟಾರ್ಗೆಟ್ ಮಾಡಿಕೊಂಡು ಹೇಗಾದರೂ ಮಾಡಿ ಮುಗಿಸುವ ಕುತಂತ್ರಗಳು ನಡೆಯುತ್ತಿದೆ. ಈ ಬಗ್ಗೆ ನಾವೆಲ್ಲಾ ಜಾಗೃತರಾಗಬೇಕಿದೆ ಎಂದು ಕವಿಯಿತ್ರಿ ಆಶಾಲತಾ ಅಲ್ಲೆಲ್ಲೋ ಕೊಲೆ ಆಗಿದೆ ಎಂದು ನಾವು ಮೌನವಾಗಿದ್ದರೆ ನಾಳೆ ನಮ್ಮ ಮನೆಗೆ ಬರುತ್ತಾರೆ ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಸರ್ಕಾರ ಜೈನಮುನಿಗಳನ್ನು ಘೋರವಾಗಿ ಹತ್ಯೆಮಾಡಿರುವ ಆರೋಪಿಗಳಿಗೆ ಸಾರ್ವಜನಿಕವಾಗಿ ಮರಣ ದಂಡನೆ ನೀಡಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಜೈನ ಮುನಿಗಳ ಭಾವಚಿತ್ರದ ಮುಂದೆ ಮೇಣದ ಬತ್ತಿ ಹಚ್ಚಿ ಶಾಂತಿದೂತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ|| ಟಿ.ವಿ. ಶಂಕರ್, ಡಾ|| ರಾಜಶ್ರೀ, ಅರಳಾಳುಸಂದ್ರದ ಶಿವಪ್ಪ, ಎಸ್.ಎಂ.ಹಳ್ಳಿ ಆನಂದಸ್ವಾಮಿ, ಗಜೇಂದ್ರ ಸಿಂಗ್, ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್ ಗೌಡ, ಬೆಂಕಿ ಶ್ರೀಧರ್, ಸಿಂಗರಾಜಿಪುರದ ಶಂಕರ್, ಚಾಮರಾಜು, ಬೋರಲಿಂಗಯ್ಯ, ರಮೇಶ್, ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್, ಜಗದಾಪುರ ಕೃಷ್ಣೇಗೌಡ, ವಿಜಯ್ ರಾಂಪುರ, ಟಿ.ಆರ್. ರಂಗಸ್ವಾಮಿ, ಡಿ.ಎಸ್.ಎಸ್. ವೆಂಕಟೇಶ್, ಜೈನ ಸಂಘದ ಕೆಕೆ ಎಲೆಕ್ಟಾçನಿಕ್ಸ್ ಮಾಲೀಕರಾದ ಕಿಸ್ತ್ತೂರ್‌ಚಂದ್, ಸುಗಂದರಾಜ್, ಕಮಲ್‌ಸಿಂಗ್, ಬೇರುಸಿಂಗ್, ಈರ್‌ಸಿಂಗ್, ಉಮಾರಾಂ, ಪೋಕರ್‌ರಾಂ, ರಾಜುಗೊಳೇಚಾರ್, ಚತುರಾರಾಂ, ಮಹಾವೀರ್ ದೋಖಾ, ಅಶೋಕ್‌ಜೈನ್, ಮಂಗಳ್‌ಕುಮಾರ್, ಮಂಜು, ಮುಖೇಶ್‌ಕುಮಾರ್, ನೇಮಿ ಚಂದ್, ಮುಕರಾಂ, ಬದಮಂ, ಸೌರಬ್‌ಶೆಟ್ಟಿ, ಅಶೋಕ್‌ಕುಮಾರ್, ವಿವೇಕ್ ಕುಮಾರ್, ಆಶೀಸ್‌ಕುಮಾರ್, ಪದಮ್‌ಕೊಠಾರಿ, ಬಾಲಾಜಿ ಜಾದವ್, ಬೇವೂರು ರಾಮಯ್ಯ, ಚೌ.ಪು.ಸ್ವಾಮಿ, ಚನ್ನಪ್ಪ (ಸಿಸಿ), ವೆಂಕಟರಮಣ, ಚಿಕ್ಕಣ್ಣಪ್ಪ, ಭೈರಾಪಟ್ಟಣ ಸತೀಶ್, ಕೂಡ್ಲೂರು ಟೈಲರ್ ಚಿಕ್ಕಯ್ಯ, ಮಹದೇವು, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ಮೈಲ್ನಾಯ್ಕನಹಳ್ಳಿ ಅಜಯ್, ಯೇಸು, ತಸ್ಲೀಮ ಬಾನು, ಕಮಲ್, ಕವಿಯಿತ್ರಿ ಎಂ.ಎಸ್. ಆಶಾಲತಾ, ಆಟೋ ವೆಂಕಟೇಶ್, ಶ್ಯಾನುಭೋಗನಹಳ್ಳಿ ಮತ್ತಿ ರವಿ, ಗುರುಮಾದಯ್ಯ, ವಸಂತ್ ಕುಮಾರ್, ಕಲಾವಿದ ತಿಮ್ಮರಾಜು, ಗಂಗಮತಸ್ಥ ಸಂಘದ ಈಶ್ವರ, ಪುರಷೋತ್ತಮ್, ಹನಿಯೂರು ಉಮಾಶಂಕರ್, ಮಂಗಳವಾರಪೇಟೆಯ ಬಾಬು, ರಘು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.