Saturday, April 19, 2025
Google search engine

Homeಸ್ಥಳೀಯಸೌಜನ್ಯ ಪ್ರಕರಣದ ನ್ಯಾಯಬದ್ಧ ತನಿಖೆಗೆ ಒತ್ತಾಯ

ಸೌಜನ್ಯ ಪ್ರಕರಣದ ನ್ಯಾಯಬದ್ಧ ತನಿಖೆಗೆ ಒತ್ತಾಯ


ಮೈಸೂರು: ೧೧ ವರ್ಷದ ಹಿಂದೆ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಬದ್ಧವಾಗಿ ತನಿಖೆಗೆ ನಡೆಸುವಂತೆ ನಗರದ ಒಡನಾಡಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಗ್ರಹಿಸಲಾಯಿತು.
ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಒಡನಾಡಿ ಸಂಸ್ಥೆಯಲ್ಲಿ ಕೆಲ ಬುದ್ದಿ ಜೀವಿಗಳು ಮತ್ತು ಪ್ರಗತಿಪರ ಚಿಂತಕರ ಸಮಾಗಮದಲ್ಲಿ ಸಂವಾದ ನೆರವೇರಿತು. ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ ಮತ್ತು ಪರಶು ಅವರ ನೇತೃತ್ವದಲ್ಲಿ ಸಂವಾದ ನೆರವೇರಿತು. ಮೃತ ಸೌಜನ್ಯಳ ತಾಯಿ, ತಂಗಿ, ಸೋದರ ಮಾವ ಭಾಗಿಯಾಗಿದ್ದರು.
ಪ್ರಗತಿಪರ ಚಿಂತಕ ಸಿ.ಬವಲಿಂಗಯ್ಯ, ದಿವಾಕರ್, ಪ್ರೊ.ಕಾಳೇಗೌಡ ನಾಗವಾರ, ಸವಿತಾ ಪ.ಮಶ್, ಕೆ.ಗೋಪಾಲಕೃಷ್ಣ, ಮಾಜಿ ಮೇಯರ್ ಪುರುಶೋತ್ತಮ್, ಬೆಟ್ಟಯ್ಯ ಕೊಟೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಳೆದ ೧೧ ವರ್ಷಗಳ ಹಿಂದೆ ಕೆಲ ದುರುಳರ ದುಷ್ಕೃತ್ಯದಿಂದ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದು, ಈ ಪ್ರಕರಣದಲ್ಲಿ ಇಂದಿಗೂ ನ್ಯಾಯ ಸಿಗದೆ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಬಂಧಿತ ಆರೋಪಿಯನ್ನು ನಿರ್ದೋಷಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ನಿಜವಾದ ಆರೋಪಿ ಬಂಧನಕ್ಕಾಗಿ ಪ್ರಗತಿಪರರು ಆಗ್ರಹಿಸಿದ್ದಾರೆ.
ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ನನ್ನ ಮಗಳನ್ನು ಅತ್ಯಾಚಾರ ಮಾಡಿದವರು ಅವಳನ್ನು ಸಾಯಿಸದೆ ಹಾಗೆ ಬಿಟ್ಟಿದ್ದರೆ ಸಾಕಿತ್ತು. ತಾಯಿಯಾಗಿ ನನ್ನ ಮಗುವನ್ನು ನಾನು ಸಾಕುತ್ತಿz. ಆದರೆ, ನನ್ನ ಮಗು ಕ್ರೂರವಾಗಿ ಸತ್ತದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ೧೧ ವರ್ಷದಿಂದ ಇದೇ ಹೇಳುತ್ತಾ ಬಂದಿzನೆ. ಮಧ್ಯಾಹ್ನ ಊಟಕ್ಕೆ ಬರುತ್ತೇನೆ ಎಂದು ಹೇಳಿ ಖಾಲಿ ಹೊಟ್ಟೆಯ ಹೋದ ನನ್ನ ಮಗುವಿನ ಮುಖವನ್ನು ಸರಿಯಾಗಿ ನೋಡಲಿಲ್ಲ. ಅವಳಿಗೆ ಮನೆ ಪಕ್ಕದವರ ಪರಿಚಯವೂ ಕಮ್ಮಿ. ಪರೀಕ್ಷೆ ಮುಗಿಸಿ ಒಂದು ಗಂಟೆಗೆ ಮನೆಗೆ ಬರಬೇಕಾದವಳು ನಾಲ್ಕು ಗಂಟೆಯಾದರೂ ಇಲ್ಲ. ಒಂದಷ್ಟು ಜನರನ್ನು ವಿಚಾರಿಸಿದ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋದೆವು. ಮಗಳು ಸಿಗುತ್ತಾಳೆ ಅನ್ನೋ ನಂಬಿಕೆ ಇತ್ತು ಆದರೆ, ಆ ಹೀನಾಯ ಸ್ಥಿತಿಯಲ್ಲಿ ಶವವಾಗಿ ಸಿಗುತ್ತಾಳೆ ಎಂದುಕೊಂಡಿರಲಿಲ್ಲ.
ಪೊಲೀಸರು ಮನೆಗೆ ಬಂದು ಸೌಜನ್ಯ ಒಳ ಉಡುಪು ಕೇಳಿದರು. ನಾನೇ ಸ್ವಲ್ಪ ಹರಿದಿದ್ದ ಅವಳ ಒಳ ಉಡುಪನ್ನು ಸ್ಟಿಚ್ ಮಾಡಿ ಕೊಟ್ಟಿದ್ದೆ. ನಮ್ಮ ಮನೆಯಿಂದ ತೆಗೆದುಕೊಂಡು ಹೋದ ಒಳ ಉಡುಪನ್ನೇ ಅವಳು ಕಾಣೆಯಾದ ದಿನ ಧರಿಸಿದ್ದು ಎಂದು ಪೊಲೀಸರು ತೋರಿಸಿದರು ಎಂದು ತಿಳಿಸಿದರು.
ನಾಲ್ವರ ಮೇಲೆ ನಮಗೆ ಸಂಶಯ ಇದೆ. ಅವರನ್ನು ಬಂಧಿಸಿ ಎಂದು ಆ ದಿನದಿಂದಲೂ ಹೇಳುತ್ತಾ ಬಂದಿದ್ದೇನೆ. ನಿಜವಾದ ಆರೋಪಿಗಳನ್ನು ಬಂಧಿಸಿ, ನನ್ನ ಮಗುವಿನ ಸಾವಿಗೆ ನ್ಯಾಯ ಸಿಗಬೇಕು ಎಂದು ಜೀವ ಹಿಡಿದಿಟ್ಟುಕೊಂಡಿzನೆ. ನಾವು ಸತ್ತರೂ ಪರವಾಗಿಲ್ಲ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular