Sunday, April 20, 2025
Google search engine

Homeಸ್ಥಳೀಯನಾಳೆ ಏಕಾಂತತೆ ಕಿರುಚಿತ್ರ ಬಿಡುಗಡೆ

ನಾಳೆ ಏಕಾಂತತೆ ಕಿರುಚಿತ್ರ ಬಿಡುಗಡೆ

ಮೈಸೂರು: ಉಷಸ್ ಪ್ರೊಡಕ್ಷನ್ ಸಂಸ್ಥೆಯಿಂದ ವಿ.ದೇವಿದಾಸ್ ನಿರ್ದೇಶನದಲ್ಲಿ ಮಲಯಾಳಂ ಭಾಷೆಯಲ್ಲಿ ಏಕಾಂತತೆ ಶೀರ್ಷಿಕೆಯ ಕಿರುಚಿತ್ರ ನಿರ್ಮಿಸಿದ್ದು, ನಾಳೆ ಸೆ.೨೮ರಂದು ಸಂಜೆ ೬ಕ್ಕೆ ಇಲ್ಲಿನ ವಿಜಯನಗರ ನಾಲ್ಕನೇ ಹಂತದ ೧ನೇ ಫೇಸ್‌ನ ಕಲ್ಪಕ್ಷೇತ್ರ ಸಭಾಂಗಣದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಚಿತ್ರದ ನಟಿ, ನಿರ್ಮಾಪಕಿ ಇಂದಿರಾ ನಾಯರ್ ತಿಳಿಸಿದರು.

ಹಿರಿಯ ನಾಗರಿಕರು ಒಂಟಿತನವನ್ನು ಹೇಗೆ ಎದುರಿಸಬಲ್ಲರು, ಈ ವೇಳೆ ಉಂಟಾಗುವ ಮಾನಸಿಕ ತೊಳಲಾಟದ ವಿಷಯ ವಸ್ತುವನ್ನಾಗಿಸಿ ಕಿರುಚಿತ್ರ ಮಾಡಲಾಗಿದೆ. ನಂದನ ವಿನೋದ್, ರಾಜೇಶ್ ಮಾಧವ ಅವರು ನಟಿಸಿದ್ದು, ಕಮಲ್ ತುಳಸಿ ಸಂಗೀತ ನೀಡಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular