Saturday, April 19, 2025
Google search engine

Homeರಾಜ್ಯಸುದ್ದಿಜಾಲಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 26 ನೇ ಅತಿದೊಡ್ಡ ವೈಟ್ ಕೋಟ್ ಸಮಾರಂಭ: ಪ್ರಮಾಣ ವಚನ ಸ್ವೀಕರಿಸಿದ...

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 26 ನೇ ಅತಿದೊಡ್ಡ ವೈಟ್ ಕೋಟ್ ಸಮಾರಂಭ: ಪ್ರಮಾಣ ವಚನ ಸ್ವೀಕರಿಸಿದ 700 ಹೊಸ ಆರೋಗ್ಯ ವೃತ್ತಿಪರರು

ಮಂಗಳೂರು (ದಕ್ಷಿಣ ಕನ್ನಡ): ತನ್ನ ಆರು ಕಾಲೇಜುಗಳಲ್ಲಿ 2024 ರ ವಿದ್ಯಾರ್ಥಿಗಳ ಸಮೂಹವನ್ನು ಸ್ವಾಗತಿಸಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವು ಸೆಪ್ಟೆಂಬರ್ 25,2024 ರಂದು ಅಲ್ ಜುರ್ಫ್ (ಅಜ್ಮಾನ್) ಕ್ಯಾಂಪಸ್ ನಲ್ಲಿ ‘ವೈಟ್ ಕೋಟ್ ಸಮಾರಂಭ’ವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ರೋಗಿಗಳ ಆರೈಕೆಗೆ ತಮ್ಮ ಬದ್ಧತೆಯನ್ನು ಸಾರ್ವಜನಿಕವಾಗಿ ಘೋಷಿಸಿದರು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 700 ವಿದ್ಯಾರ್ಥಿಗಳಿರುವ ಬ್ಯಾಚ್ ಅಂತರರಾಷ್ಟ್ರೀಯ ಸಮುದಾಯವನ್ನು ಸೇರುತ್ತದೆ.
ಈಗ 102 ವಿವಿಧ ರಾಷ್ಟ್ರಗಳಿಂದ 5,000 ವಿದ್ಯಾರ್ಥಿಗಳನ್ನು ಹೊಂದಿದೆ. ಈ ವಿದ್ಯಾರ್ಥಿಗಳು ಆರು ಕಾಲೇಜುಗಳಲ್ಲಿ ವಿವಿಧ ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಶೈಕ್ಷಣಿಕ ಅಧ್ಯಯನದ ಜೊತೆಗೆ, ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ಉದ್ಯಮದ ಮೇಲೆ ಅದರ ಗಮನಾರ್ಹ ಪ್ರಭಾವವನ್ನು ಅನ್ವೇಷಿಸಲು ಅವರಿಗೆ ಇಲ್ಲಿ ಅವಕಾಶವಿದೆ. ಇನ್ನು ಈ ಸಮಾರಂಭದ ಅಧ್ಯಕ್ಷತೆಯನ್ನು ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದ್ದೀನ್ ವಹಿಸಿದ್ದರು.

ಜೊತೆಗೆ ಉಪಕುಲಪತಿಗಳು, ಡೀನ್, ವಿವಿಯ ಕುಲಪತಿ ಪ್ರೊ.ಹೊಸ್ಸಾಮ್ ಹಮ್ದಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಮೊಯಿದ್ದೀನ್, “ನಾನು ಆರೋಗ್ಯ ವೃತ್ತಿಯ ಹೊಸ ಗುಂಪಿನ ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಆರೋಗ್ಯ ಆರೈಕೆಯ ನಾಯಕರಾಗುವ ನಿಮ್ಮ ಪ್ರಯಾಣವು ಇಲ್ಲಿಂದ ಪ್ರಾರಂಭವಾಗುತ್ತದೆ. ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವು ನಿಮ್ಮ ಎಲ್ಲಾ ವೃತ್ತಿಜೀವನದ ಆಕಾಂಕ್ಷೆಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ” ಎಂದರು.

ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್), ಬ್ಯಾಚುಲರ್ ಆಫ್ ಬಯೋಮೆಡಿಕಲ್ ಸೈನ್ಸಸ್ (ಬಿಬಿಎಂಎಸ್), ಪ್ರಿ-ಕ್ಲಿನಿಕಲ್ ಸೈನ್ಸಸ್‌ ಅಸೋಸಿಯೇಟ್ ಡಿಗ್ರಿ (ಎಡಿಪಿಸಿಎಸ್), ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್ (ಡಿಎಂಡಿ), ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ್ಡಿ), ಬ್ಯಾಚುಲರ್ ಆಫ್ ಫಿಸಿಯೋಥೆರಪಿ (ಬಿಪಿಟಿ), ಬ್ಯಾಚುಲರ್ ಆಫ್ ಸೈನ್ಸ್ – ಮೆಡಿಕಲ್ ಲ್ಯಾಬೊರೇಟರಿ ಸೈನ್ಸಸ್ (ಬಿಎಸ್ಸಿ ಎಂಎಲ್ಎಸ್), ಬ್ಯಾಚುಲರ್ ಆಫ್ ಸೈನ್ಸ್ – ಮೆಡಿಕಲ್ ಇಮೇಜಿಂಗ್ ಸೈನ್ಸಸ್ (ಬಿಎಸ್ಸಿ ಎಂಐಎಸ್), ಬ್ಯಾಚುಲರ್ ಆಫ್ ಸೈನ್ಸ್ – ಅನಸ್ತೇಷಿಯಾ ಟೆಕ್ನಾಲಜಿ (ಬಿಎಸ್ಸಿ ಎಟಿ), ಬ್ಯಾಚುಲರ್ ಆಫ್ ಸೈನ್ಸ್ ಇನ್ ನರ್ಸಿಂಗ್ (ಬಿಎಸ್ಎನ್) ಮತ್ತು ಬ್ಯಾಚುಲರ್ ಆಫ್ ಸೈನ್ಸ್ ಇನ್ ಹೆಲ್ತ್ಕೇರ್ ಮ್ಯಾನೇಜ್ಮೆಂಟ್ ಅಂಡ್ ಎಕನಾಮಿಕ್ಸ್ (ಬಿಎಸ್ಸಿ ಎಚ್ಎಂಇ) ಈ ಕೋರ್ಸ್ ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಬಿಳಿ ಕೋಟುಗಳನ್ನು ನೀಡಲಾಯಿತು.

RELATED ARTICLES
- Advertisment -
Google search engine

Most Popular