ಮದ್ದೂರು: ‘ಸಿದ್ದರಾಮಯ್ಯರನ್ನ ರಾಜಕೀಯವಾಗಿ ಕಟ್ಟಿಹಾಕಲು ಸಾಧ್ಯವಿಲ್ಲ ‘ ತನಿಖೆಗೆ ರಾಜೀನಾಮೆ ನೀಡಿದ್ರೆ ಮತ್ತೆ 15 ದಿನದಲ್ಲಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಮದ್ದೂರಿನ ಕದಲೂರು ಗ್ರಾಮದಲ್ಲಿ ಶಾಸಕ ಕದಲೂರು ಉದಯ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯರನ್ನ ರಾಜಕೀಯವಾಗಿ ಇಲ್ಲಿವರೆಗೂ ಯಾರು ಕಟ್ಟಿಹಾಕಲು ಸಾಧ್ಯವಾಗಿಲ್ಲ. ಏನಾದರೂ ಮಾಡಿ ಅವರ ಮೇಲೆ ಕಪ್ಪು ಚುಕ್ಕಿ ತಂದು ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲು ಬಿಜೆಪಿ ಜೆಡಿಎಸ್ ಸಂಚು ಮಾಡುತ್ತಿದೆ. ಇದರಲ್ಲಿ ಯಾವುದೇ ಉರಳಿಲ್ಲ, ತನಿಖೆ ಮಾಡಲಿ ಸತ್ಯ ಸತ್ಯತೆ ತಿಳಿಲಿ. ಬಿಜೆಪಿಯವರಿಗೆ ಮಾಡಲು ಬೇರೆ ಏನು ಕೆಲಸವಿಲ್ಲ ಹಾಗಾಗಿ ರಾಜೀನಾಮೆ ರಾಜೀನಾಮೆ ಅಂತ ಬೊಬ್ಬೆ ಹೊಡಿತ್ತಿದ್ದಾರೆ. ಸಿಎಂ ಗೆ ಶಾಸಕರ, ಸಚಿವರ ಬೆಂಬಲ ಇದೆ. ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಅವರಿಗೆ ಹೈಕಮಾಂಡ್ ಶ್ರೀ ರಕ್ಷೆ ಕೂಡ ಇದೆ. ತನಿಖೆ ಎದುರಿಸೋಕೆ ರಾಜೀನಾಮೆ ನೀಡಿದ್ರೆ ಮತ್ತೆ 15 ದಿನದಲ್ಲಿ ಅವರೇ ಮುಖ್ಯಮಂತ್ರಿ ಆಗ್ತಾರೆ. ಅಥವಾ ನಮ್ಮ ಪಕ್ಷದ ಬೇರೆಯವರು ಮುಖ್ಯಮಂತ್ರಿ ಬರುತ್ತಾರೆ. ಇದರಿಂದ ಬಿಜೆಪಿ ಅವರಿಗೆ ಏನು ಲಾಭ? ಎಂದು ಟೀಕಿಸಿದರು.
ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಆಗಲು ಸಾಧ್ಯ. ಈಗಾಗಲೇ ಸಿದ್ದರಾಮಯ್ಯ ಇದ್ದಾರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.