ಕೆ.ಆರ್.ನಗರ : ರೈತರಿಗೆ ನೀಡ ಬೇಕಿರುವ ಹಾಲಿನ 7 ತಿಂಗಳ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮುಂದಾಗ ಬೇಕು ಎಂದು ಹಳಿಯೂರು ಬಡಾವಣೆಯ ಜನನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಅಗ್ರಹಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 31 ರೂ ಪ್ರತಿ ಲೀಟರ್ ಹಾಲಿನ ದರವನ್ನು 35 ರೂಗಳಿಗೆ ಹೆಚ್ಚಿಸಿ ರೈತರ ಹಿತಕಾಯ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರೈತರು ಸರಬರಾಜು ಮಾಡುವ ಹಾಲಿನಲ್ಲಿ ಗುಣಮಟ್ಟ ಇದ್ದರೆ ಉತ್ತಮ ಅದಾಯ ರೈತರಿಗೆ ಸಿಗಲಿದ್ದು ಜೊತೆಗೆ ಸಂಘದ ಅಭಿವೃದ್ಧಿಗೆ ಸಹಕಾರ ಅಗಲಿದ್ದು ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ರೀತಿಯಲ್ಲಿ ಹಾಲಿನ ಗುಣಮಟ್ಟಕ್ಕೆ ಅದ್ಯತೆ ನೀಡುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಹಾಲು ಒಕ್ಕೂಟದ ಕೆ.ಆರ್.ನಗರ ತಾಲೂಕಿನ ಮಾರ್ಗವಿಸ್ತರಾಧಿಕಾರಿ ಚಿಕ್ಕನಾಯನಹಳ್ಳಿ ಸಿ.ಜಿ.ಅಭಿಷೇಕ್ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸವಲತ್ತು ಮತ್ತು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಆಹಾರ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಸಿಇಓ ಎಚ್.ಪಿ.ರಾಜೇಶ್ ವಾರ್ಷಿಕ ವರದಿ ಓದಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಮ್ ಗೌಡ, ನಿರ್ದೇಶಕರಾದ ಗಾರೆ ಕೃಷ್ಣ, ಎಚ್.ಎಸ್.ಅಜಯ್ ಕುಮಾರ್, ಎಚ್.ಬಿ.ಜಯಣ್ಣ, ಲಕ್ಷ್ಮಿನಾಗರಾಜು, ನೀಲಾವತಿರೇವಣ್ಣ, ಟೈಲರ್ ಚಂದ್ರು, ಮುಖಂಡರಾದ ಎಸ್.ಟಿ.ಕೀರ್ತಿ, ಎ.ಕುಚೇಲ್, ಬಿ.ರಮೇಶ್, ಗುತ್ತಿಗೆದಾರ ಎಚ್.ಆರ್.ರಾಘವೇಂದ್ರ, ಎಚ್.ಡಿ.ಭಾಸ್ಕರ್, , ಗಣೇಶ್ ಅಣ್ಣಯ್ಯ, ಸಂಘದ ಸಿಬ್ಬಂದಿ ಕೀರ್ತಿ ಮುಂತಾದವರು ಇದ್ದರು.