ಮಂಗಳೂರು (ದಕ್ಷಿಣ ಕನ್ನಡ): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಮ್ಮಾರ ಎಂಬಲ್ಲಿ ನಡೆದಿದೆ. ಈ ಅಪಘಾತದ ವಿಡಿಯೋ ಸಿಸಿಟಿವಿ ಸೆರೆಯಾಗಿದೆ. ಕಡಬ ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಡ್ಡಲಾಗಿ ಬಿದ್ದ ಕಾರನ್ನು ಕೂಡಲೇ ಸ್ಥಳೀಯರು ಜೊತೆಗೂಡಿ ಮೇಲಕ್ಕೆತ್ತಿ ಸರಿ ಮಾಡಿ ನಿಲ್ಲಿಸಿದ್ದಾರೆ. ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ.