Saturday, April 19, 2025
Google search engine

Homeಸಿನಿಮಾಬಿಗ್​ಬಾಸ್ ಹೋಗೋ ಎಲ್ಲ ಸ್ಪರ್ಧಿಗಳ ಹೆಸರು ಲೀಕ್: ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ?

ಬಿಗ್​ಬಾಸ್ ಹೋಗೋ ಎಲ್ಲ ಸ್ಪರ್ಧಿಗಳ ಹೆಸರು ಲೀಕ್: ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ?

ಬಿಗ್​ಬಾಸ್ ಕನ್ನಡ ಸೀಸನ್ 11 ಇಂದು ಸಂಜೆ ಆರು ಗಂಟೆಯಿಂದ ಪ್ರಾರಂಭ ಆಗಲಿದೆ. ನಿನ್ನೆ ಕಲರ್ಸ್ ವಾಹಿನಿಯಲ್ಲಿ ನಡೆದ ರಾಜಾ ರಾಣಿ ರೀಲೋಡೆಡ್ ಫಿನಾಲೆ ಕಾರ್ಯಕ್ರಮದಲ್ಲಿ ನಾಲ್ಕು ಜನ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಆ ನಾಲ್ವರಲ್ಲಿ ಯಾರು ಸ್ವರ್ಗಕ್ಕೆ ಹೋಗಲಿದ್ದಾರೆ ಯಾರು ನರಕಕ್ಕೆ ಹೋಗಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ. ಸದ್ಯಕ್ಕೆ ನಾಲ್ಕು ಮಂದಿ ಸ್ಪರ್ಧಿಗಳ ಹೆಸರಷ್ಟೆ ಘೋಷಣೆ ಆಗಿದ್ದು ಇನ್ನೂ ಸುಮಾರು 12 ರಿಂದ 14 ಮಂದಿ ಸ್ಪರ್ಧಿಗಳ ಹೆಸರು ಇಂದು ಸಂಜೆ ಘೋಷಣೆ ಆಗಲಿದೆ.

ಇಂದು ಸಂಜೆ ಸುದೀಪ್ ಘೋಷಣೆ ಮಾಡಲಿರುವ ಸ್ಪರ್ಧಿಗಳ ಹೆಸರುಗಳು ಮುಂಚಿತವಾಗಿ ಲೀಕ್ ಆಗಿದ್ದು, ಅವರಲ್ಲಿ ಯಾರು ಸ್ವರ್ಗಕ್ಕೆ ಹೋಗಲಿದ್ದಾರೆ ಯಾರು ನರಕಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.

ನಿನ್ನೆ ನಡೆದ ರಾಜಾ ರಾಣಿ ಫಿನಾಲೆಯಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರ ಹೆಸರುಗಳು ಘೋಷಣೆಯಾಗಿದೆ. ಇವರಲ್ಲಿ ಲಾಯರ್ ಜಗದೀಶ್ ಮತ್ತು ಗೌತಮಿ ಜಾಧವ್ ಅವರುಗಳು ಸ್ವರ್ಗಕ್ಕೆ ಹೋಗಲಿದ್ದು, ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರುಗಳು ನರಕಕ್ಕೆ ಹೋಗಲಿದ್ದಾರಂತೆ.

ಸೋಷಿಯಲ್ ಮೀಡಿಯಾದಿಂದ ಜನಪ್ರಿಯವಾದ ಆ ಬಳಿಕ ಗಿಚ್ಚಿ ಗಿಲಿ-ಗಿಲಿಗೂ ಹೋಗಿ ಬಂದಿರುವ ಧನರಾಜ್ ಅವರು ಬಿಗ್​ಬಾಸ್ ಮನೆಗೆ ಹೋಗಲಿದ್ದಾರಂತೆ. ನಟರಾದ ಕೀರ್ತಿ ಧರ್ಮರಾಜ್ ಸಹ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ. ‘ನವಗ್ರಹ’ ಸಿನಿಮಾದಲ್ಲಿ ಇವರು ದರ್ಶನ್ ಜೊತೆ ನಟಿಸಿದ್ದರು. ನಟ ಉಗ್ರಂ ಮಂಜು ಸಹ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ. ನಟಿಯರಾದ ಯಮುನಾ, ಭವ್ಯ, ಐಶ್ವರ್ಯಾ, ತ್ರಿವಿಕ್ರಮ್ ಮತ್ತು ಹಂಸ ಅವರುಗಳು ಸಹ ಬಿಗ್​ಬಾಸ್ ಮನೆಯಲ್ಲಿದ್ದು, ಇವರೆಲ್ಲರೂ ಸ್ವರ್ಗದಲ್ಲಿ ಇರಲಿದ್ದಾರಂತೆ.

ನಟ ಶಿಶಿರ ನಟಿ ಮೋಕ್ಷಿತ ಹಾಗೂ ಕಳೆದ ಬಾರಿ ಬಿಗ್​ಬಾಸ್​ಗೆ ಹೋಗಿದ್ದ ತುಕಾಲಿ ಸಂತೋಷ್ ಅವರ ಪತ್ನಿ ತುಕಾಲಿ ಮಾನಸ ಸಹ ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ. ಇವರ ಜೊತೆಗೆ ರಂಜಿತಾ ಸಹ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ. ಇವರುಗಳು ನರಕದಲ್ಲಿ ಇರಲಿದ್ದಾರಂತೆ.

RELATED ARTICLES
- Advertisment -
Google search engine

Most Popular