ಮಂಗಳೂರು (ದಕ್ಷಿಣ ಕನ್ನಡ): ಅಡಿಕೆ ಬೆಳೆಗಾರರ ಪರವಾಗಿ ಬೆಳೆಗಾರರ ಹಿತ ಕಾಯಲು ಸದಾ ಸಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಅಡಿಕೆ ಪ್ರಮುಖ ಅಡಿಪಾಯ. ಕೇಂದ್ರ ಸರಕಾರ ಅಡಿಕೆ ಆಮದಿಗೆ ಅನುಮತಿ ನೀಡಿರುವುದರಿಂದ ನಮ್ಮ ಅಡಿಕೆ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಹೊಡೆತ ನಿಶ್ಚಿತ.
ಅಡಿಕೆ ಆಮದು ನೀತಿ ವಿರುದ್ಧ ಪಕ್ಷಾತೀತ ಹೋರಾಟ ಅಗತ್ಯ ಎಂದು ಪುತ್ತೂರಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ ನೀಡಿದ್ದಾರೆ.