ಎಚ್ ಡಿ ಕೋಟೆ: ಮೈಸೂರು ಜಿಲ್ಲೆ,ಎಚ್ ಡಿ ಕೋಟೆ ತಾಲೋಕು ದಾಸನಪುರ ಗ್ರಾಮದಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಸುಮಾರು 2000 ಬಾಳೆ ಗಿಡದ ತೋಟ ನಾಶವಾಗಿರುವುದು ತಿಳಿದುಬಂದಿದೆ. ರೈತನಿಗೆ 6 ರಿಂದ 8 ಲಕ್ಷ ನಷ್ಟ ಅನುಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ಮುಂದಿನ ವಾರದಲ್ಲಿ ಬೆಳೆ ತೆಗೆಯಲು ನಿರ್ಧರಿಸಿದ್ದರು. ಇದೀಗ ತೋಟಗಳು ಸಂಪೂರ್ಣ ಹಾಳಾಗಿರುವುದರಿಂದ ಕಂಗೆಟ್ಟಿದ್ದಾರೆ.

ತೋಟದಲ್ಲಿನ ಬಾಳೆ ಗಿಡಗಳು ಬಾಳೆ ಕಾಯಿ ಬಿಟ್ಟು ಇನ್ನೇನು ಕೆಲವೇ ದಿನಗಳಲ್ಲಿ ಫಸಲು ನಿರೀಕ್ಷೆಯಲ್ಲಿದ್ದ ರೈತ ದೊರೆಸ್ವಾಮಿ ಜೀವನಕ್ಕೆ ರಾತ್ರಿ ಸುರಿದ ಮಳೆ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತನಿಗೆ ಸುಮಾರು ಆರು ಲಕ್ಷ ರೂಪಾಯಿ ಬೆಳೆ ನಷ್ಟವಾಗಿದೆ. ಸಾಲ ಮಾಡಿ ತೋಟ ಮಾಡಿದ್ದೆ, ಫಲವತ್ತಾದ ಬೆಳೆ ಕೈ ಸೇರುವಷ್ಟರಲ್ಲಿ ಮಳೆ ಬಿದ್ದು ಸಂಪೂರ್ಣ ತೋಟ ನಾಶವಾಗಿದೆ ಎಂದು ರೈತ ದೊರೆಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.