ಮಂಗಳೂರು (ದಕ್ಷಿಣ ಕನ್ನಡ): ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಂದು ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ಲಡ್ಡು ವಿವಾದ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಧರ್ಮಾಗ್ರಹ ಸಭೆಯ ಬಳಿಕ ಮಾತನಾಡಿದ ಅವರು, ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಿ, ಎಲ್ಲಾ ದೇವಸ್ಥಾನಗಳನ್ನ ಹಿಂದುಗಳಿಗೆ ಬಿಟ್ಟು ಕೊಡಬೇಕು ಎಂದಿದ್ದಾರೆ.
ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನದ ನಿರ್ವಹಣೆ ಮಾಡಿದ್ದರು. ಬ್ರಿಟಿಷ್ ಸರಕಾರ ದೇವಾಲಯದ ಸಂಪತ್ತನ್ನ ಕೊಳ್ಳೆ ಹೊಡೆಯಲು ಸರಕಾರದ ಅಧೀನಕ್ಕೆ ತಂದಿತ್ತು.ಮುಸಲ್ಮಾನರಿಗೆ ಮಸೀದಿ ನಡೆಸಲು ಹಾಗೂ ಕ್ರೈಸ್ತರಿಗೆ ಚರ್ಚ್ ನಡೆಸಲು ಅವರಿಗೆ ಅವಕಾಶ ನೀಡಿದ್ದಾರೆ. ಅದು ಒಳ್ಳೆ ಯದು ಅದಕ್ಕೆ ನಮ್ಮ ತಕರಾರರಿಲ್ಲಆದರೆ ಹಿಂದೂಗಳ ದೇವಸ್ಥಾನವನ್ನ ಸರಕಾರ ಯಾಕೆ ಅಧೀನಕ್ಕೆ ತೆಗೆದುಕೊಂಡಿದೆ.
ದೇವಸ್ಥಾನದ ಭೂಮಿಗಳನ್ನ ಕಬಳಿಸಿದ್ದೀರ ಭಕ್ತರು ಹಾಕಿದ ಕಾಣಿಕೆಯನ್ನ ನೀವು ತೆಗೆದುಕೊಂಡು ಹೋಗಿದ್ದೀರ, ಈಗ ನಮ್ಮ ದೇವಸ್ಥಾನದ ಪ್ರಸಾದಕ್ಕೂ ಕೈ ಹಾಕಿದ್ದೀರ..ಇದಕ್ಕಿಂತ ದೊಡ್ಡ ಅನ್ಯಾಯ ಅಪಮಾನ ಬೇರೇನಿದೆ? ಹಾಗಾಗಿ ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಿ. ಪ್ರಸ್ತುತ ಕರ್ನಾಟಕ ಸರಕಾರ ದೇವಾಲಯದ ಆಡಳಿತ ಮಂಡಳಿಯಲ್ಲಿ ಮುಸಲ್ಮಾನರನ್ನ ಸೇರಿಸುವ ಪ್ರಯತ್ನ ನಡೆಸುತ್ತಿದೆ ಅದು ಸರಕಾರದ ಹುಚ್ಚ ನಿರ್ಧಾರ ಎಂದು ಕಿಡಿಕಾರಿದ್ದಾರೆ.