ಬೆಂಗಳೂರು: ನಾಳೆಯಿಂದ ನವರಾತ್ರಿ ಶುರುವಾಗುತ್ತಿದೆ. ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.
ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಅ. ೩ ರಿಂದ ೨೦ರ ತನಕ ದಸರಾ ರಜೆ ಘೋಷಿಸಿದ್ದು, ನಾಳೆಯಿಂದಲೇ ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದೆ.
೨೦೨೪-೨೫ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ ೩ ರಿಂದ ೨೦ ರವರೆಗೆ ಇರಲಿದೆ. ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆಗಳು ಆರಂಭವಾಗಲಿದೆ.