Saturday, April 19, 2025
Google search engine

HomeUncategorizedರಾಷ್ಟ್ರೀಯಮಹಾತ್ಮ ಗಾಂಧಿ ಜನ್ಮದಿನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ

ಮಹಾತ್ಮ ಗಾಂಧಿ ಜನ್ಮದಿನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ

ಹೊಸದಿಲ್ಲಿ: ರಾಷ್ಟ್ರ ಪಿತ ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಬುಧವಾರ(ಅ2 ) ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ರಾಜಘಾಟ್ ನಲ್ಲಿ ಪುಷ್ಪ ನಮನ ಸಲ್ಲಿಸಿದರು.

ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮೋದಿ, ಪೂಜ್ಯ ಬಾಪು ಅವರ ಜೀವನ ಮತ್ತು ಸತ್ಯ, ಸಾಮರಸ್ಯ ಮತ್ತು ಸಮಾನತೆಯ ಆಧಾರದ ಮೇಲೆ ಆದರ್ಶಗಳು ಯಾವಾಗಲೂ ದೇಶದ ಜನರಿಗೆ ಸ್ಫೂರ್ತಿ ಎಂದಿದ್ದಾರೆ.

ಇದೇ ದಿನದಂದು ಜನಿಸಿದ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೂ ವಿಜಯ್ ಘಾಟ್ ನಲ್ಲಿ , ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಗಣ್ಯರು ಗೌರವ ಸಲ್ಲಿಸಿದ್ದಾರೆ.

‘ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ತಮ್ಮ ಜೀವನವನ್ನು ದೇಶದ ಸೈನಿಕರು, ರೈತರು ಮತ್ತು ಹೆಮ್ಮೆಗಾಗಿ ಮುಡಿಪಾಗಿಟ್ಟರು. ಅವರ ಸರಳತೆ ಮತ್ತು ಪ್ರಾಮಾಣಿಕತೆ ಅವರಿಗೆ ವ್ಯಾಪಕ ಗೌರವವನ್ನು ತಂದುಕೊಟ್ಟಿತು’ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular