ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗಾಂಧೀಜಿಯವರ ಹೋರಾಟದಿಂದಾಗಿ ನಾವು ಸ್ವಾತಂತ್ರ್ಯ ಗಾಳಿ ಸೇವಿಸುವ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಅದಕ್ಕಾಗಿ ಅವರನ್ನು ಸದಾ ಸ್ಮರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಾಂಧಿ ಇಡೀ ಜಗತ್ತಿನ ನಾಯಕ ಎಂಬ ಗೌರವ ದೊರೆತಿರುವುದು ಭಾರತೀಯರಿಗೆ ಸಿಕ್ಕ ಹೆಗ್ಗಳಿಕೆ ಎಂದರು.
ಜಯಂತಿ ಆಚರಣೆ ಮತ್ತು ಭಾಷಣಗಳಿಂದ ಗಾಂಧೀಜಿಯವರ ಆಶಯಗಳು ಈಡೇರುವುದಿಲ್ಲ ಎಂದ ಶಾಸಕ ಡಿ.ರವಿಶಂಕರ್ ಗಾಂಧೀಜಿಯವರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಪಡೆಯಲು ಕಾರಣರಾದ ಗಾಂಧೀಜಿಯವರು ದೇಶದ ಉತ್ಪನ್ನಗಳನ್ನು ಬಳಸುವಂತೆ ಮತ್ತು ಸರಳತೆಯ ಜೀವನ ನಡೆಸಲು ಕರೆ ನೀಡಿದ್ದರು ಇದರಿಂದ ಪ್ರೇರಣೆಗೊಂಡು ಇಂದಿಗೂ ಹಲವರು ಸರಳ
ಜೀವನ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ ಎಂದ ಶಾಸಕರು ಯುವ ಜನತೆ ಸರಳತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕೋರಿದರು.
ಲಾಲ್ ಬಹುದ್ದೂರ್ ಶಾಸ್ತ್ರಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ ಪ್ರಧಾನ ಮಂತ್ರಿಯಾದ ಸಂಧರ್ಭದಲ್ಲಿ ಜೈ ಜವಾನ್ ಜೈ ಕಿಶಾನ್ ಎಂಬ ಘೋಷ ವಾಕ್ಯದೊಂದಿಗೆ ರೈತರಿಗೆ ಸಾಕಷ್ಟು ಅನುಕೂಲವಾಗುವಂತಹಾ ಯೋಜನೆಗಳನ್ನು ಜಾರಿಗೆ ತಂದಿದ್ದರು ಇಂತಹಾ ಮಹಾತ್ಮರ ಜಯಂತಿಯನ್ನು ಮುಂದಿನ ವರ್ಷ ವಿನೂತನವಾಗಿ ಆಚರಣೆ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ಜಯಂತಿಗಳು ಆಚರಣೆ ಮಾಡುತ್ತಿರುವುದರಿಂದ
ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ ಆದ್ದರಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ,
ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಈ ಇಬ್ಬರ ಜಯಂತಿಗಳನ್ನು ಹೊರತು ಪಡಿಸಿ ಉಳಿದವನ್ನು
ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಐದು ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ವಿಜಯಲಕ್ಷ್ಮಿ ಪ್ರಧಾನ ಭಾಷಣ ಮಾಡಿದರು. ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿದರು.
ನಗರ ಯೋಜನಾ ಪ್ರಾಧೀಕರಾದ ಅಧ್ಯಕ್ಷ ಗಡ್ಡಮಹೇಶ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಸದಸ್ಯ ಸೈಯದ್‌ಅಸ್ಲಾಂ, ಇಒ ಕುಲ್‌ದೀಪ್, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಟಿಹೆಚ್‌ಒ ಡಾ.ಡಿ.ನಟರಾಜ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ನೀರಾವರಿ ಇಲಾಖೆಯ ಎಇಇ ಅಯಾಜ್‌ಪಾಷ, ಅರಣ್ಯ ಇಲಾಖೆಯ ಹರಿಪ್ರಸಾದ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಮುಖಂಡರಾದ ತಿಮ್ಮಶೆಟ್ಟಿ, ಕೆ.ಪಿ.ಜಗದೀಶ್, ಬಿ.ಹೆಚ್.ಕುಮಾರ್, ಗೊರಗುಂಡಿಚoದ್ರು, ವ್ಯಾನ್‌ಸುರೇಶ್, ರಾಮಾಚಾರಿ, ಎಂ.ಲೋಕೇಶ್, ಕಾಟ್ನಾಳ್‌ಮಹದೇವ್ ಮತ್ತಿತರರು ಇದ್ದರು.