ಚಾಮರಾಜನಗರ: ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಸರಳವಾಗಿ ಮತ್ತು ಭಜನೆಯ ಮೂಲಕ ಆಚರಿಸಲಾಯಿತು.
ಭೂಗೋಳಶಾಸ್ತ್ರ ಉಪನ್ಯಾಸಕ ಮೂರ್ತಿ ರವರು ಮಹಾತ್ಮ ಗಾಂಧೀಜಿಯವರ ಕುರಿತ ಭಜನೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು, ಉಪನ್ಯಾಸಕರು ಜೊತೆಗೂಡಿ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇತಿಹಾಸ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಸತ್ಯ, ಅಹಿಂಸೆ ಸತ್ಯಾಗ್ರಹ, ಎಂಬ ವಿಶೇಷವಾದ ತತ್ವಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ತರುವ ನಾಯಕತ್ವವನ್ನು ವಹಿಸಿದ್ದರು. ಗಾಂಧೀಜಿಯವರ ತತ್ವಗಳು ಇಡೀ ಜಗತ್ತಿಗೆ ಪ್ರಸರಿಸಿದೆ. ಅವರ ತತ್ವಗಳ ಪಾಲನೆಯಿಂದ ಮಾನವ ನೆಮ್ಮದಿಯಾಗಿ ಬದುಕಬಹುದು ಎಂದರು.

ಪ್ರಾಚಾರ್ಯರಾದ ಶಿವನಂಜಪ್ಪನವರು ಅಧ್ಯಕ್ಷತೆ ನುಡಿಯ ಮೂಲಕ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಚಿಂತನೆಗಳು ಭಾರತಕ್ಕೆ ಅಲ್ಲದೆ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ಶಿವಸ್ವಾಮಿ ,ಇಂಗ್ಲೀಷ್ ಉಪನ್ಯಾಸಕ ಶಿವರಾಮ್, ಅರ್ಥಶಾಸ್ತ್ರ ಉಪನ್ಯಾಸಕ ಬಸವಣ್ಣ, ಕನ್ನಡ ಉಪನ್ಯಾಸಕ ರಮೇಶ್ ವಾಣಿಜ್ಯಶಾಸ್ತ್ರ ಉಪನ್ಯಾಸಕ ಸುರೇಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.