Saturday, April 19, 2025
Google search engine

Homeಅಪರಾಧಆರ್‌ಜೆಡಿ ಮುಖಂಡನ ಮೇಲೆ ಗುಂಡಿನ ದಾಳಿ: ಸ್ಥಿತಿ ಚಿಂತಾಜನಕ

ಆರ್‌ಜೆಡಿ ಮುಖಂಡನ ಮೇಲೆ ಗುಂಡಿನ ದಾಳಿ: ಸ್ಥಿತಿ ಚಿಂತಾಜನಕ

ಬಿಹಾರ: ಬೆಳಗ್ಗೆ ವಾಕಿಂಗ್‌ಗೆಂದು ಹೊರಟಿದ್ದ ಆರ್‌ಜೆಡಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾರೆ. ಪಂಕಜ್- ಯಾದವ್-ಎಲ್ಸಿಎಲ್‌ಆರ್-ಬಿಹಾರದ ಮುಂಗೇರ್‌ನಲ್ಲಿ ನಿರ್ಭೀತ ಕ್ರಿಮಿನಲ್‌ಗಳು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಕಜ್ ಯಾದವ್ ಮೇಲೆ ಗುಂಡು ಹಾರಿಸಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಳೆದ ತಿಂಗಳಷ್ಟೇ ಪಾಟ್ನಾ ನಗರದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ಯಾಮ್ ಸುಂದರ್ ಶರ್ಮಾ ಅಲಿಯಾಸ್ ಮುನ್ನಾ ಶರ್ಮಾ ಅವರ ಬೈಕ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತದನಂತರ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಆರ್‌ಜೆಡಿ ನಾಯಕನ ಮೇಲೆ ಗುಂಡು ಹಾರಿಸಿದವರು ಯಾರು ಮತ್ತು ಏಕೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸಫಿಯಾ ಸರಾಯ್, ಖಾಸಿಂ ಬಜಾರ್ ಮತ್ತು ಕೊತ್ವಾಲಿ ಪೊಲೀಸರು ಆಗಮಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular