Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ: ರೊ. ಡಾ.ನಾಗರಾಜ್

ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ: ರೊ. ಡಾ.ನಾಗರಾಜ್

ಹುಣಸೂರು: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂದು ರೊ. ಡಾ.ನಾಗರಾಜ್ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ನಡೆದ ಜಿಲ್ಲಾ ರೋಟರಿ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಇಲ್ಲದವರ ಬದುಕಿಗೆ, ನೆರವಾಗುವುದರ ಜತೆಗೆ ಸಾಧನೆ ಗೈದವರ ಗುರುತ್ತಿಸುವ ಮೂಲಕ ಸಮಾಕ್ಕೆ ರೋಟರಿ ಮಾದರಿಯಾಗಿದೆ ಎಂದರು.

ಸಹಾಯಕ ಗವರ್ನರ್ ಆನಂದ್ ಆರ್ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಮುಖಿ ಕೆಲಸ ಮಾಡುವ ಮುಖೇನಾ ಒಬ್ಬರನೊಬ್ಬರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಬೆಸುಗೆ ಹಾಕುವ ಸ್ನೇಹ ಸೇತುವೆಯಾಗಿ ಅಂತರಾಷ್ಟ್ರೀಯ ಮಟ್ಟಕ್ಕೇರಿದೆ ಎಂದರು.

ಪಿರಿಯಾಪಟ್ಟಣ ರೊ. ವಲಯ ಸೇನಾನಿ ರಾಜೇಗೌಡ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾ ಮಟ್ಟದಲ್ಲಿ ನಡೆಯುವುದರಿಂದ. ರೋಟರಿ ಕುಟುಂಬದಲ್ಲೂ ಪ್ರತಿಭೆಗಳು ಸಮಾಜಕ್ಕೆ ಪರಿಚಯವಾಗಿ, ರಾಜ್ಯಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಪ್ರಸನ್ನ ಕೆ.ಪಿ., ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್, ವಲಯ ಸೆನಾನಿ ಪಿ.ಪಾಂಡುಕುಮಾರ್, ಸಾಂಸ್ಕೃತಿಕ ರಾಯಬಾರಿ, ಸುನಿತಾ ಮಹೇಶ್, ಸಾಂಸ್ಕೃತಿಕ ಛೇರ್ಮನ್ ಡಾ.ಬಸವರಾಜ್, ರೋಟರಿ ಹಿರಿಯ ಸದಸ್ಯರಾದ, ಧರ್ಮಾಪುರ ನಾರಾಯಣ್, ಡಾ.ವೃಷ್ಬೇಂದ್ರ ಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಚನ್ನಕೇಶವ, ಗಿರೀಶ್, ಧರ್ಮಾಪುರ ಶ್ಯಾಮಣ್ಣ, ರೊ.ಮಹೇಶ್ ಕುಶಾಲ್ ನಗರ, ಮಡಿಕೇರಿ ಮಹೇಶ್, ಉಲ್ಲಾಸ್, ಶಶಿ ಕುಮಾರ್, ಇದ್ದರು.

RELATED ARTICLES
- Advertisment -
Google search engine

Most Popular