Sunday, April 20, 2025
Google search engine

Homeರಾಜಕೀಯನಾಗಮಂಗಲದಲ್ಲಿ ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಫೈಟ್: ಆಡಿಯೋ ವೈರಲ್

ನಾಗಮಂಗಲದಲ್ಲಿ ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಫೈಟ್: ಆಡಿಯೋ ವೈರಲ್

ಮಂಡ್ಯ: ನಾಗಮಂಗಲದಲ್ಲಿ ಜೆಡಿಎಸ್-ಕಾಂಗ್ರೆಸ್ ಆಡಿಯೋ, ವಿಡಿಯೋ ಫೈಟ್ ಮತ್ತಷ್ಟು ತಾರಕಕ್ಕೇರಿದೆ.

ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕೆ ಲೈನ್ ಮೇನ್ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ನಾಗಮಂಗಲ ತಾಲೂಕಿನ ವ್ಯಕ್ತಿಯೋರ್ವ ಕೆಇಬಿ ಸಿಬ್ಬಂದಿ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದೆ.

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆಡಿಯೋವನ್ನು ಜೆಡಿಎಸ್ ಹರಿಬಿಟ್ಟಿದೆ.

ಆಡಿಯೋದಲ್ಲೇನಿದೆ ?

ಕೃಷ್ಣೇಗೌಡ: ಕರೆಂಟ್ ಪದೇ ಪದೇ ಹೋಗ್ತಿದೆ, ಮಕ್ಕಳು ಓದೋದು ಬೇಡ್ವಾ.? ಜಿಟಿ ಜಿಟಿ ಮಳೆಗೆ ಗಂಟೆಗಟ್ಟಲೇ ಕರೆಂಟ್ ತೆಗೆದ್ರೇ ಹೇಗೆ ಎಂದು ಕೃಷ್ಣೇಗೌಡ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆಇಬಿ ಸಿಬ್ಬಂದಿ, ತೊಂದರೆ ಏನಾಗಿದೆ ಎಂದು ಲೈನ್ ಮೇನ್ ಚೆಕ್ ಮಾಡ್ತಾವ್ನೆ. ಇದೇ ವೇಳೆ ಮಾತು ಮುಂದುವರೆಸಿ ಒಬ್ಬ ರಜಾ ಹಾಕವ್ನೇ. ಭೀಮನಹಳ್ಳಿ ಲೈನ್ ಮೇನ್ ಹುಡುಗನನ್ನು ಜೆಡಿಎಸ್ ಗೆ ಮಾಡ್ದಾ ಅಂತಾ ಟ್ರಾನ್ಸ್‌ಫರ್ ಮಾಡವ್ರೆ ಎನ್ನುವ ಸಿಬ್ಬಂದಿ.

ಕೃಷ್ಣೇಗೌಡ: ಒಟ್ನಲ್ಲಿ ಜೆಡಿಎಸ್ ಗೆ ಮಾಡ್ದವರು ಯಾರು ಕೆಲಸದಲ್ಲಿ ಇರಂಗಿಲ್ವ?

ಕೆಇಬಿ ಸಿಬ್ಬಂದಿ:  ನೋಡಪ್ಪ ಹಿಂಗ್ ಮಾಡವ್ರೇ, ಹಿಂಗ್ ಮಾಡಿ ಮಾಡಿ ಲೈನ್ ಟ್ರಬಲ್ ಆದ್ರೆ ಕೆಲಸ ಮಾಡೋಕೆ ಆಗಲ್ಲ.

ಕೃಷ್ಣೇಗೌಡ: ಅಲ್ಲ ಸರ್ ಜೆಡಿಎಸ್ ಆಗ್ಲಿ, ಕಾಂಗ್ರೆಸ್ ನವರೇ ಆಗ್ಲಿ ಕರೆಂಟ್ ಕೊಡಬೇಕಲ್ವಾ?

ಕೆಇಬಿ ಸಿಬ್ಬಂದಿ:  ಅಧಿಕಾರಿಗಳು ಕೇಳೋಕೆ ಆಗುತ್ತಾ, ನೀವೇ ಕೇಳಿ .

ಕೃಷ್ಣೇಗೌಡ: ಇರೀ ಫೇಸ್ ಬುಕ್ ಗೆ ಹಾಕ್ತೀನಿ ಕಾಲ್ ರೆಕಾರ್ಡ್ ಮಾಡ್ಕೊಂಡಿದ್ದೀನಿ. ಮಾತು ಮುಂದುವರೆಸಿ ಫ್ರೀ ಕರೆಂಟ್ ಅಂತ ಅರ್ಧಬರ್ಧ ಕರೆಂಟ್ ಕೊಡಿ ಎಂದು ಸರ್ಕಾರ ಆದೇಶ ಬಂದಿದ್ಯಾ ಏನೂ.?

ಕೆಇಬಿ ಸಿಬ್ಬಂದಿ:  ಬಳಿಕ ಎಚ್ಚೆತ್ತ ಸಿಬ್ಬಂದಿ ನಮಗೇನು ಆದೇಶ ಬಂದಿಲ್ಲ ಎಂದು ಪೋನ್ ಕರೆ ಸ್ಥಗಿತಗೊಳಿಸಿದ್ದಾರೆ.

ಸಾರ್ವಜನಿಕ ಹಾಗೂ ಕೆಇಬಿ ಸಿಬ್ಬಂದಿ ಮಾತುಕತೆ ಆಡಿಯೋ ವನ್ನು ಜೆಡಿಎಸ್ ನವರು ಹರಿಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular