ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ದೊಡ್ಡತಾಯಮ್ಮ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಕೋಮಲ ಎಂಬುವವರು ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸಂಬಂಧ ಪಂಚಾಯಿತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಟ್ನವಾಡಿ ಗ್ರಾಮದ ದೊಡ್ಡತಾಯಮ್ಮ ಎಂಬುವವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಯಾಗಿ ಪಶು ಇಲಾಖೆಯ ಡಾ. ಶಿವರಾಜು, ೨೦ ಜನ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿರುವ ಪಂಚಾಯಿತಿಯಲ್ಲಿ ಮಾನಸ ಎಂಬುವವರು ಹೊರತುಪಡಿಸಿ ಇತರೆ ೧೯ ಮಂದಿ ಸದಸ್ಯರೂ ಹಾಜರಿದ್ದಾರೆ ಇವರೆಲ್ಲೂ ದೊಡ್ಡತಾಯಮ್ಮರನ್ನು ಬೆಂಬಲಿಸಿದ್ದು, ಇವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ದೊಡ್ಡತಾಯಮ್ಮ ಮಾತನಾಡಿ, ಕೆಸ್ತೂರು ಗ್ರಾಮ ಪಂಚಾಯಿತಿ ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ, ಕೆಸ್ತೂರು, ಕೆ. ಹೊಸೂರು, ಕಟ್ನವಾಡಿ, ಬಸವಾಪುರ ಗ್ರಾಮಗಳು ಒಳಪಡುತ್ತವೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನನ್ನ ಅವಧಿಯಲ್ಲಿ ಸರ್ಕಾರದಿಂಬ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೆ ನರೇಗಾ ಯೋಜನೆಯಡಿಯಲ್ಲಿ ಪಂಚಾಯಿತಿ ಅಭಿವೃದ್ಧಿಗೆ ಪೂಕರವಾಗುವ ಹಾಗೂ ಸಾಮಾನ್ಯ ಜರಿಗೆ ಅತೀ ಅವಶ್ಯಕವಾಗಿರುವ ಕಾಮಗಾರಿಗಳನ್ನು ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದರೊಂದಿಗೆ ಮೂಲ ಅವಶ್ಯಕತೆಗಳಾಗ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಚರಂಡಿ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಹೆಚ್ಚಿನ ಅಧ್ಯತೆ ನೀಡಲಾಗುವುದು ಎಂದರು.
ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಕೆ.ಎನ್. ಬಾಲುಪ್ರಸಾದ್, ಪಿ. ಮಹದೇವಸ್ವಾಮಿ, ಎನ್. ರೂಪ, ಕೆ.ಎಂ.ರಾಜು, ಎನ್. ಕುಮಾರ್, ಎನ್. ಭಾಗ್ಯ ಆರ್. ಸುನಂದ, ಎಸ್. ಮಹದೇವಸ್ವಾಮಿ, ಗುರುಲಿಂಗಯ್ಯ, ಸಿ. ಸುನೀತಾ, ಎಸ್. ಮಹೇಂದರ್, ಜಿ. ಪ್ರಸಾದ್, ಕೋಮಲ, ಕೆ.ಬಿ. ಮಲ್ಲಣ್ಣ, ಮಮತ, ಎಸ್. ರಾಚಪ್ಪಾಜಿ, ಎಂ.ಎಂ. ಶೃತಿ ಪಿಡಿಒ ಮಹದೇವಸ್ವಾಮಿ ಮುಖಂಡರಾದ ಸಿದ್ದರಾಜು, ಗುರು ಸೇರಿದಂತೆ ಅನೇಕರು ಇದ್ದರು.