ಅರಂತೋಡು: ಆಸ್ತಿ ವಿವಾದ ಕಾರಣದಿಂದಾಗಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಶುಕ್ರವಾರ ವರದಿಯಾಗಿದೆ.
ಸತ್ತಾರ್, ರಫೀಕ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಕುದ್ರೆಪಾಯದಲ್ಲಿದ್ದು, ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬುವರನ್ನು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ.
ಸಂಪಾಜೆ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.