Saturday, April 19, 2025
Google search engine

Homeರಾಜ್ಯಜಾತಿ ನಿಂದನೆ ಆರೋಪ : ಹಾಸ್ಯ ನಟ ಕಾರ್ತಿಕ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ಜಾತಿ ನಿಂದನೆ ಆರೋಪ : ಹಾಸ್ಯ ನಟ ಕಾರ್ತಿಕ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು :ಜಾತಿ ನಿಂದನೆ ಆರೋಪ ಸಂಬಂಧ ಹಾಸ್ಯನಟ ಹುಲಿ ಕಾರ್ತಿಕ್ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಒಂದು ಸಮುದಾಯವನ್ನು ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್ ಮಾತನಾಡಿದ್ದರು.ಹುಲಿ ಕಾರ್ತಿಕ್ ಅವರು ಯಾವುದೋ ರೋಡ್ ಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ ಎಂದು ಹೇಳಿಕೆ ನೀಡಿದ್ದರು. ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.

ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ’ ಅವಾರ್ಡ್ಸ್​ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ಕೇಸ್ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್ ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ ದೂರು ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular