Sunday, April 20, 2025
Google search engine

Homeರಾಜ್ಯಸುದ್ದಿಜಾಲನಮ್ಮ ಚೆಲುವ ಕನ್ನಡ ನಾಡು ಗೀತೆ ಕನ್ನಡಿಗರ ಹೆಮ್ಮೆಯ ಗೀತೆ:ಬಾಲಸುಬ್ರಮಣ್ಯಂ

ನಮ್ಮ ಚೆಲುವ ಕನ್ನಡ ನಾಡು ಗೀತೆ ಕನ್ನಡಿಗರ ಹೆಮ್ಮೆಯ ಗೀತೆ:ಬಾಲಸುಬ್ರಮಣ್ಯಂ

ಚಾಮರಾಜನಗರ: ಕನ್ನಡಿಗರಲ್ಲಿ ನವ ಚೈತನ್ಯ ಹಾಗೂ ಕನ್ನಡದ ವೈಭವವನ್ನು ಜಗತ್ತಿಗೆ ತಿಳಿಸಿದ  ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಕನ್ನಡಿಗರ ಹೆಮ್ಮೆಯ ಗೀತೆಯಾಗಿದೆ ಎಂದು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಗ್ರಂಥಪಾಲಕರ ಬಾಲಸುಬ್ರಮಣ್ಯಂ ರವರು ತಿಳಿಸಿದರು. 

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಾ ರಚನಕಾರ ಸಾಹಿತಿ ಹುಯಿಲಗೋಳ ನಾರಾಯಣರಾಯರ ಜನ್ಮದಿನದಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡುತ್ತಾ 1924 ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಬಾಲಕಿ ಶ್ರೇಷ್ಠ ಗಾಯಕಿ  ಗಂಗೂಬಾಯಿ ಹಾನಗಲ್ ರವರು ಹಾಡಿದ ಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಏಕೀಕರಣದಲ್ಲಿ ತುಂಬಾ ಪ್ರಭಾವ ಬೀರಿದ ಗೀತೆಯಾಗಿದೆ  ನಾರಾಯಣರಾಯರು ಶಿಕ್ಷಕರಾಗಿ, ವಕೀಲರಾಗಿ , ಸಾಹಿತಿಯಾಗಿ ಸೇವೆಯನ್ನು ಸಲ್ಲಿಸಿದವರು ಅಂತಹ ಶ್ರೇಷ್ಠ ಸಾಹಿತಿಯನ್ನು ಸ್ಮರಿಸಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ನಾಡು ,ನುಡಿ ಜಲ,ಭಾಷೆಯ ಬಗ್ಗೆ ದುಡಿದ ಮಹನೀಯರನ್ನು ಪರಿಚಯಿಸುವ ಕಾರ್ಯವನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು. 

ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು,  ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್  ಋಗ್ವೇದಿ ಮಾತನಾಡುತ್ತಾ  ನಾರಾಯಣರಾಯರು ಕನ್ನಡದ ಶ್ರೇಷ್ಠ ನಾಟಕಕಾರರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕೋಟ್ಯಾಂತರ ಕನ್ನಡಿಗರ ಧ್ವನಿಯಾಗಿದೆ . ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ ,ಪೌರಾಣಿಕ ,ಸಾಮಾಜಿಕ ನಾಟಕಗಳನ್ನು ರಚನೆ ಮಾಡಿ ಪ್ರದರ್ಶನಗಳ ಮೂಲಕ ನಾಡಿನಲ್ಲಿ ಜಾಗೃತಿಯನ್ನು ಮೂಡಿಸಿದವರು. ಪತ್ರಿಕೋದ್ಯಮಿಯು ಆಗಿದ್ದ ನಾರಾಯಣರಾಯರು ಜೈ ಕರ್ನಾಟಕ ವೃತ್ತ, ಪ್ರಭಾತ ,ಧನಂಜಯ ಪತ್ರಿಕೆಗಳನ್ನು ನಡೆಸಿದವರು .15ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ನಾರಾಯಣರಾಯರು ವಿದ್ಯಾದಾನ ಸಮಿತಿಯ ಮೂಲಕ ಶಾಲೆಯನ್ನು ನಿರ್ಮಿಸಿ ಶಿಕ್ಷಣಕ್ಕೂ ಅಮೂಲ್ಯವಾದ ಕೊಡುಗೆಯನ್ನು ನೀಡಿದವರು ನಾಡಗೀತೆಯಾಗಿದ್ದ ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಮಾಜಿ ನಗರ ಸಭಾ ಸದಸ್ಯರಾದ ಪದ್ಮ ಪುರುಷೋತ್ತಮ್ ಸರಸ್ವತಿ ಬಿಕೆ ಆರಾಧ್ಯ ಶಿವಲಿಂಗ ಮೂರ್ತಿ ಗೋವಿಂದರಾಜು ಮಹೇಶ್ ಕಾರ್ತಿಕ್ ಸುರೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular