ನವದೆಹಲಿ: ಹರಿಯಾಣ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ ಅವರು ೫,೦೦೦ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜೂಲಾನಾ ಕ್ಷೇತ್ರದಲ್ಲಿ ವಿನೇಶ್ ಫೋಗಟ್‌ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರು ಕಣಕ್ಕಿಳಿದಿದ್ದರು. ಆರಂಭದ ಮತ ಎಣಿಕೆಯಲ್ಲಿ ವಿನೇಶ್ ಫೋಗಟ್ ಅವರಿಗೆ ಮುನ್ನಡೆ ಸಿಕ್ಕಿದ್ದು, ಬಳಿಕ ಯೋಗೇಶ್ ಕುಮಾರ್ ಅವರಿಗೆ ಮುನ್ನಡೆ ಸಿಕ್ಕಿತ್ತು. ಈ ಮೂಲಕ ಯೋಗೇಶ್ ಕುಮಾರ್ ಮತ್ತು ವಿನೇಶ್ ಫೋಗಟ್ ಮಧ್ಯೆ ನೇರಾನೇರಾ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಿದ್ದಿದ್ದು, ವಿನೇಶ್ ಫೋಗಟ್ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.